ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲು ಪರಿಸರದಲ್ಲಿ ಗುರುವಾರ ಸಿಡಿಲು ಬಡಿದು ಮೊಬೈಲ್ ಟವರ್‌ಗೆ ಹಾನಿಯಾಗಿದೆ. ಇದೇ ವೇಳೆ ಪರಿಸರದ ಹಲವು ಮನೆಗಳ ವಿದ್ಯುತ್ ಉಪಕರಣಗಳು ಹಾಳಾಗಿದ್ದು, ಟವರ್ ಸಮೀಪ ಮನೆ ಹೊಂದಿದ್ದ ಕಡಂದಲೆಯ ಪತ್ರಕರ್ತ ಜಗದೀಶ್ ಪೂಜಾರಿ ಅವರ ಕಾಲಿಗೂ ಗಾಯವಾಗಿರುವುದಾಗಿದೆ.
ಗುರುವಾರ ರಾತ್ರಿ ಕಡಂದಲೆ ಪರಿಸರದಲ್ಲಿ ಸಂಭವಿಸಿದ ಸಿಡಿಲಿನ ಆಘಾತದಿಂದ ಮೊಬೈಲ್ ಟವರ್‌ಗೆ ಹಾನಿಯಾಗಿದ್ದು, ಟವರ್ಗೆ ಬಡಿದ ಸಿಡಿಲು ಪಕ್ಕದ ಮನೆಗಳಿಗೂ ಬೆಂಕಿಯ ಜ್ವಾಲೆ ಹಬ್ಬಿಸಿತು. ಮೊಬೈಲ್ ನೆಟ್‌ವರ್ಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಸ್ಥಳೀಯರು ಮೊಬೈಲ್ ಸಂಪರ್ಕ ಪಡೆಯಲು ತೊಂದರೆ ಅನುಭವಿಸುವಂತಾಗಿದೆ.
