ಮೂಡುಬಿದಿರೆ

ಅಕ್ಟೋಬರ್ 20 ಮಂಗಳವಾರ ದಿಂದ ಎರಡು ದಿನ ಬನ್ನಡ್ಕದಲ್ಲಿ ಶಾರದೋತ್ಸವ

ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಡ (ರಿ.) ಪಡುಮಾರ್ನಾಡು ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಬನ್ನಡ್ಕ ದೇವಸ್ಥಾನದ ಕಲಾಮಂದಿರದಲ್ಲಿ ಮಾರ್ನಾಡು ವೇದಮೂರ್ತಿ ಎಂ.ಆರ್.ಅನಂತ ಪದ್ಮನಾಭ ಅಸ್ರಣ್ಣರ ಪೌರೋಹಿತ್ಯದಲ್ಲಿ ಅಕ್ಟೋಬರ್ 20 ಮತ್ತು 21 ರಂದು 5 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಜರುಗಲಿದೆ ಎಂದು ಸಮಿತಿಯ ಅಧ್ಯಕ್ಷ ದಯಾನಂದ ಪೈ ಹಾಗೂ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಗಂಟೆ 10.30 ಕ್ಕೆ ಶ್ರೀ ಶಾರದಾಂಬೆಯ ಪ್ರತಿಷ್ಠಾಪನೆ, ಶಾರದೋತ್ಸವದ ಉದ್ಘಾಟನಾ ಸಮಾರಂಭ, ದೀಪ ಪ್ರಜ್ವಲನೆ
ದುರ್ಗಾಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಎರಡು ದಿನ ನಡೆಯಲಿದೆ.
ಮಂಗಳವಾರ ಸಂಜೆ ಗಂಟೆ 4.00ಕ್ಕೆ ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈವೆಟ್ ಲಿ. ಬನ್ನಡ್ಕ ಇದರ ಸಂಸ್ಥಾಪಕರಾದ ಡಾ. ಜಿ. ರಾಮಕೃಷ್ಣ ಆಚಾರ್ ಅವರಿಗೆ “ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ – 2026″ ಪುರಸ್ಕಾರ ನಡೆಯಲಿದೆ.

ರಾಷ್ಟ್ರಪತಿಯವರಿಂದ ಗೌರವ ಪುರಸ್ಕೃತ ಶ್ರೀಮತಿ ಅನುಷಾ ಪ್ರಜ್ವಲ್ ಅಚಾರ್ಯ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಕ ಕಿಶೋರ್ ಅವರಿಗೆ ಸನ್ಮಾನ ನಡೆಯಲಿದೆ. ಅಂದು ಸಾಯಂಕಾಲ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಲಿದ್ದಾರೆ.
ಟ್ರಸ್ಟ್ ಅಧ್ಯಕ್ಷರಾದ ದಯಾನಂದ ಪೈ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀರಾಮುಲು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಮೋಹನ್ ಆಳ್ವ, ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್, ಹೈಕೋರ್ಟ್ ವಕೀಲ ಡಾ. ಎಂ. ಆರುಣ್ ಶ್ಯಾಂ, ಬೆಂಗಳೂರು, ಸಿ.ಎ ಬ್ಯಾಂಕ್ ಬೆಳುವಾಯಿ ಅಧ್ಯಕ್ಷರು ಭಾಸ್ಕರ್ ಎಸ್. ಕೋಟ್ಯಾನ್ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ದೇವದಾಸ್ ಕಾಪಿಕಾಡ್ ಮಂಗಳೂರು ನೇತೃತ್ವದ ನಾಟಕ ತಂಡದ ಸಂಸಾರಿಕ ಹಾಸ್ಯಮಯ ನಾಟಕ ಜರುಗಲಿದೆ.

ಅಕ್ಟೋಬರ್ 21 ರಂದು ಗಂಟೆ 10.30ರಿಂದ ಮನೋಜ್ ರಾಜ್ ಕಟೀಲ್ ಮತ್ತು ಬಳಗದವರಿಂದ  ನಾದ ಸ್ವರ ವಾದನ,ರೂಪೇಶ್ ಕುಮಾರ್ ಮೂಡುಬಿದಿರೆ “ಟಾಪ್ ಎಂಟರ್ ಟೈನ್ ಮೆಂಟ್” ಡ್ಯಾನ್ಸ್ ಸ್ಟುಡಿಯೋ ಮೂಡುಬಿದಿರೆ ಇವರಿಂದ ನೃತ್ಯ ವೈಭವ ಮತ್ತು ವಿಸರ್ಜನಾ ಪೂಜೆ ನಡೆಯಲಿದೆ. ನಂತರ ವೈಭವದ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ಮೆರವಣಿಗೆ ಜರುಗಲಿದೆ.

Related posts

ಶ್ರೀಮಹಾವೀರ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ

Madhyama Bimba

ಸುಮುಖ ಕುಣಿತ ಭಜನಾ ಮಂಡಳಿ ಉದ್ಘಾಟನೆ

Madhyama Bimba

ಪುತ್ತಿಗೆಯಲ್ಲಿ ಗುಡುಗು ಮಿಂಚಿಗೆ ಹಾನಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More