ಕಾರ್ಕಳ ಬೈಲೂರ್ ಉಮಿಕಲ್ ಕುಂಜದಲ್ಲಿ ಪರಶುರಾಮರ ಮೂರ್ತಿ ನಿರ್ಮಾಣ ಮಾಡಿದ ಶಿಲ್ಪಿ ಕೃಷ್ಣ ನಾಯ್ಕ್ ರಿಗೆ ಕಾರ್ಕಳ ನ್ಯಾಯಾಲಯವು 7 ದಿನಗಳ ಪೊಲೀಸ್ ಕಸ್ಟಡಿ ನೀಡಿದೆ.
ನಕಲಿ ಪರಶುರಾಮರ ಮೂರ್ತಿಯ ವಿಚಾರದಲ್ಲಿ ಪೊಲೀಸರು ಕೃಷ್ಣ ನಾಯ್ಕ್ ಮೇಲೆ ಕೇಸು ದಾಖಲು ಮಾಡಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಲಯವು ಕೃಷ್ಣ ನಾಯ್ಕ್ ನೀಡಿದ ನಿರೀಕ್ಷಣ ಜಾಮೀನು ತಿರಸ್ಕಾರ ಮಾಡಿತ್ತು.
ಈ.ಘಟನೆ ಬಳಿಕ ಅವರು ಕೇರಳಕ್ಕೆ ತೆರಳಿದ್ದರು. ಈ ಮಾಹಿತಿ ತಿಳಿದ ಪೊಲೀಸರು ಪುದುಚೆರಿಯಲ್ಲಿ ಕೃಷ್ಣ ನಾಯ್ಕ್ ನನ್ನು ಬಂಧನ ಮಾಡಿದ್ದರು.
ಇಂದು ಆತನನ್ನು ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕರೆ ತರಲಾಗಿದೆ.
previous post
next post