ಮುದ್ರಾಡಿ ನಿವಾಸಿ ಹರೀಶ್ ಕುಲಾಲ್ ಬಲ್ಲಾಡಿ ವಿದ್ಯುತ್ ಅವಘಡದಿಂದ ನಿಧನರಾಗಿದ್ದಾರೆ.
ನಿನ್ನೆ ರಾತ್ರಿ ತನ್ನ ಮನೆಯಲ್ಲಿ ಬಲ್ಬ್ ಸಿಕ್ಕಿಸಲು ಅವರು ತೊಡಗಿದ್ದ ಸಂದರ್ಭದಲ್ಲಿ ವಿದ್ಯುತ್ ಅವರ ಮೇಲೆ ಪ್ರವಹಿಸಿ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ನಿಧನ ಕಾಲಕ್ಕೆ ಅವರಿಗೆ 46 ವರ್ಷ ವಯಸ್ಸು ಆಗಿತ್ತು.
ಅವರು ಮುದ್ರಾಡಿ ಪರಿಸರದಲ್ಲಿ ಎಲ್ಲರೊಂದಿಗೆ ಬೆರೆತು ಬಾಳುತ್ತಿದ್ದರು.
ಸಂತಾಪ : ಹರೀಶ್ ಕುಲಾಲ್ ಓರ್ವ ಪ್ರಾಮಾಣಿಕ ವ್ಯಕ್ತಿ ಅವರ ಆಗಲುವಿಕೆ ನಿಜಕ್ಕೂ ದುಃಖ ತಂದಿದೆ ಎಂದು ಗುರು ರಕ್ಷಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಂಜುನಾಥ್ ಪೂಜಾರಿ ಸಂತಾಪ ಸೂಚಿಸಿದ್ದಾರೆ.