ಮಿಯ್ಯಾರು ಮಂಜಡ್ಕ ನಿವಾಸಿ ಅಂಗನವಾಡಿ ಕಾರ್ಯಕರ್ತೆ ಸೌಮ್ಯ (39ವ) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಅವರ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸುಮಾರು 20 ದಿನಗಳ ಹಿಂದೆ ಸೌಮ್ಯ ಅವರು ಹಠತ್ತಾಗಿ ಕಾಣೆಯಾಗಿದ್ದರು. ತಕ್ಷಣ ಈ ಬಗ್ಗೆ ಮಾಹಿತಿ ಪಡೆದು ಶೋಧನೆ ನಡೆಸಿದಾಗ ಅವರು ಮಲ್ಪೆಯ ಬಳಿ ಮಾನಸಿಕವಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡುವ ನಿಟ್ಟಿನಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು.
ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿದ್ದ ಅವರು ಪತಿಯ ಅಗಲುವಿಕೆಯ ನಂತರ ಜೀವನದಲ್ಲಿ ಬಹಳಷ್ಟು ನೊಂದಿದ್ದರು. ಸ್ಥಳೀಯವಾಗಿ ಎಲ್ಲರೊಡನೆ ಸೌಹಾರ್ದತೆಯಿಂದ ಬಾಳುತ್ತಿದ್ದ ಅವರ ಈ ಆತ್ಮಹತ್ಯೆಯ ಕಾರ್ಯ ಸ್ಥಳೀಯರಲ್ಲಿ ನೋವನ್ನುಂಟು ಮಾಡಿದೆ.