ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಉಪನಿರ್ದೇಶಕರ ಕಛೇರಿ, ಮೈಸೂರು, ಜಿಲ್ಲಾ ಪಂಚಾಯತ್ ಮೈಸೂರು ಇವರ ಆಶ್ರಯದಲ್ಲಿ ಮೈಸೂರಿನಲ್ಲಿ ನಡೆದ ಮೈಸೂರು ವಿಭಾಗಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಗಣ್ಯ ಪೂಜಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈ ಪಂದ್ಯಾಟದಲ್ಲಿ ಪ್ರೌಢಶಾಲಾ ಬಾಲಕಿಯರ ತಂಡ ದ್ವಿತೀಯ ಸ್ಥಾನ ಹಾಗೂ ಪ್ರಾಥಮಿಕ ಶಾಲೆಯ ಬಾಲಕರ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.
ಪ್ರಾಥಮಿಕ ವಿಭಾಗದ ಬಾಲಕರ ತಂಡವನ್ನು ಏಳನೇ ತರಗತಿಯ ಅಶ್ವಿನ್ ಶೆಟ್ಟಿ, ಪ್ರೆಸ್ಟನ್ ಡಿ’ಸೋಜ, ಆರನೇ ತರಗತಿಯ ವಿಹಾನ್ ಪೂಜಾರಿ, ರಿಸ್ಟನ್ ಸೆರಾವೋ ಪ್ರತಿನಿಧಿಸಿದರೆ,
ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡವನ್ನು ಹತ್ತನೇ ತರಗತಿಯ ಗಣ್ಯ ಪೂಜಾರಿ, ಅನಘ ರಾವ್ ಪ್ರತಿನಿಧಿಸಿದ್ದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್ ಹಾಗೂ ಕು.ಲಾವಣ್ಯ ತಂಡದ ನೇತೃತ್ವ ವಹಿಸಿದ್ದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್ ಹಾಗೂ ಕು.ಲಾವಣ್ಯ ತಂಡದ ನೇತೃತ್ವ ವಹಿಸಿದ್ದರು.