ಕಾರ್ಕಳಹೆಬ್ರಿ

ಉಡುಪಿ: ಉಚಿತ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ ಹಾಗೂ ಶ್ರವಣ ಯಂತ್ರ ವಿತರಣೆ

ರೋಟರಿ ಕ್ಲಬ್ ಕಲ್ಯಾಣಪುರ, ಲಯನ್ಸ್ ಮತ್ತು ಲಿಯೋ ಕ್ಲಬ್ ಉಡುಪಿ ಅಮೃತ್, ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ ಹಾಗೂ ಶ್ರವಣ ಯಂತ್ರ ವಿತರಣಾ ಕಾರ್ಯಕ್ರಮವು ನ. 28ರಂದು ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಮೈಸೂರು ಅಖಲ ಭಾರತೀಯ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕರಾದ ಡಾ. ಎಂ. ಪುಷ್ಪಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವು ಪೂರ್ವಾಹ್ನ ಬೆಳಿಗ್ಗೆ 8.30ರಿಂದ ನಡೆಯಲಿದೆ. ಶಿಬಿರದ ಪ್ರಯೋಜನವನ್ನು ಪಡೆಯಲು ಫಲಾನುಭವಿಗಳು ಬರುವಾಗ ಇತ್ತೀಚಿನ ಭಾವಚಿತ್ರ 3 ಪ್ರತಿ, ಆಧಾರ್ ಕಾರ್ಡ್‌ನ ಮೂಲಪತ್ರಿ ಹಾಗೂ 3 ನಕಲು ಪ್ರತಿ, ಬಿಪಿಎಲ್ ಕಾರ್ಡ್/ ಅಂತ್ಯೋದಯ ಕಾರ್ಡ್ ಮೂಲಪ್ರತಿ ಹಾಗೂ 3 ನಕಲು ಪ್ರತಿ, ಬಿಪಿಎಲ್ ಕಾರ್ಡ್ / ಅಂತ್ಯೋದಯ ಕಾರ್ಡ್ 5 ವರ್ಷಕ್ಕಿಂತ ಮೇಲ್ಪಟ್ಟಿದ್ದಲ್ಲಿ ಆದಾಯ ರೂ. 1,80,000 ಒಳಗಿನ ಪ್ರಮಾಣ ಪತ್ರದ ಮೂಲಪ್ರತಿ ಹಾಗೂ 3 ನಕಲು ಪ್ರತಿ, 15 ವರ್ಷದ ಒಳಗಿನ ಮಕ್ಕಳು ಫಲಾನುಭವಿಯಾದಲ್ಲಿ ತಂದೆ / ತಾಯಿಯ ಭಾವಚಿತ್ರ 3 ಪ್ರತಿ,ಆಧಾರ್ ಕಾರ್ಡ್‌ನ 3 ಪ್ರತಿ ಹಾಗೂ ಬಿಪಿಎಲ್ ಕಾರ್ಡ್ / ಅಂತ್ಯೋದಯ ಕಾರ್ಡ್ ಮೂಲಪ್ರತಿ ಹಾಗೂ 3 ನಕಲು ಪ್ರತಿ, ಫಲಾನುಭವಿಯ ಆಧಾರ್ ಕಾಡ್‌ನ ಮೂಲಪ್ರತಿ ಹಾಗೂ 3ನಕಲು ಪ್ರತಿ ತರುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆ ಮೈಸೂರು, ಆದಿತ್ಯ ಟ್ರಸ್ಟ್ (ರಿ.) ನಕ್ರೆ ಕಾರ್ಕಳ ಇವರ ಸಹಯೋಗದೊಂದಿಗೆ ಶಿಬಿರವು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ 7892962815, 8105369076, 98451639382 ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮತದಾರರ ಪಟ್ಟಿ ಪರಿಷ್ಕರಣೆ: ಹೊಸ ನೋಂದಣಿಗೆ ಅವಕಾಶ

Madhyama Bimba

ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

Madhyama Bimba

ಜಿಲ್ಲೆಯಲ್ಲಿ ಗುರುತಿಸಲಾದ ಬ್ಲ್ಯಾಕ್ ಸ್ಪಾಟ್ ಸ್ಥಳಗಳನ್ನು ಅಪಘಾತ ಮುಕ್ತ ವಲಯಗಳನ್ನಾಗಿಸಲು ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ . ಕೆ ವಿದ್ಯಾಕುಮಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More