ಕಾರ್ಕಳಹೆಬ್ರಿ

ಅಜೆಕಾರು: ಟೆಂಪೋ ಡಿಕ್ಕಿ- ಮಕ್ಕಳೀರ್ವರಿಗೆ ಗಾಯ

ಅಜೆಕಾರು: ಅಜೆಕಾರು ಮಸೀದಿ ಬಳಿ ರಸ್ತೆ ಬದಿ ನಿಂತುಕೊಂಡಿದ್ದ ಮಕ್ಕಳಿಗೆ ಟೆಂಪೋ ಡಿಕ್ಕಿಯಾಗಿ ಮಕ್ಕಳೀರ್ವರು ಗಾಯಗೊಂಡ ಘಟನೆ ಜ. 20ರಂದು ವರದಿಯಾಗಿದೆ.


ಅಜೆಕಾರು ಮದರಸಕ್ಕೆ ಕಲಿಯಲು ಬಂದ ಮಕ್ಕಳಾದ ಫಾತಿಮತ್ ಸಮ್ರೀನ (6) ಮತ್ತು ಫಾತಿಮತ್ ಸನ (10) ಗಾಯಗೊಂಡವರು.

ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ಹೋಗುತ್ತಿದ್ದ ಟೆಂಪೋ ಚಾಲಕನು ಅತೀ ವೇಗದಿಂದ ಚಲಾಯಿಸಿಕೊಂಡು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ಪರಿಣಾಮ ಮಕ್ಕಳು ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಕಾರ್ಕಳ ಟಿ.ಎಮ್.ಎ ಪೈ ಆಸ್ಪತ್ರೆಗೆ ದಾಖಲು ಮಾಡಿ, ಫಾತಿಮತ್ ಸಮ್ರೀನಳಿಗೆ ತಲೆಗೆ ಏಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಜೆಸಿಐ ಬೆಳ್ಮಣ್ ಘಟಕಕ್ಕೆ ರಾಷ್ಟ್ರಪ್ರಶಸ್ತಿ

Madhyama Bimba

ಕಾರ್ಕಳ: ವೆಸ್ಟರ್ನ್ ವತಿಯಿಂದ ಈಸ್ಟರ್ನ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್

Madhyama Bimba

ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆ ಇದು ಸಹಜ ಪ್ರಕ್ರಿಯೆ, ಇದರಲ್ಲಿ ಶಾಸಕರ ಯಾವುದೇ ಪಾತ್ರವಿಲ್ಲ- ಪ್ರಚಾರಕ್ಕಾಗಿ ಗಿಮಿಕ್‌ಗಳನ್ನು ಬಿಟ್ಟು ಶಾಸಕರು ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ನೀಡಲಿ: ಶ್ರೀಮತಿ ಭಾನು ಭಾಸ್ಕರ ಪೂಜಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More