ಕಾರ್ಕಳ

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025 -2028 ರ ಸಾಲಿನ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಪುನರಾಯ್ಕೆ

ಕಾರ್ಕಳ : ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025 -2028 ರ ಸಾಲಿನ ಅಧ್ಯಕ್ಷರಾಗಿ ವಾರ್ತಾಭಾರತಿ ಪತ್ರಿಕೆಯ ವರದಿಗಾರ ಮೊಹಮ್ಮದ್ ಶರೀಫ್ ಪುನರಾಯ್ಕೆಯಾಗಿದ್ದಾರೆ.


ಪ್ರಧಾನ ಕಾರ್ಯದರ್ಶಿಯಾಗಿ ಸಂಜೆಪ್ರಭ ಪತ್ರಿಕೆ ವರದಿಗಾರ ಹರೀಶ್ ಪೂಜಾರಿ, ಕೋಶಾಧಿಕಾರಿಯಾಗಿ ಮಾಧ್ಯಮಬಿಂಬ ಪತ್ರಿಕೆಯ ವರದಿಗಾರ ಸತೀಶ್ ಎಚ್ ಶೆಟ್ಟಿ, ಆಯ್ಕೆಯಾಗಿದ್ದಾರೆ .

ಉಪಾಧ್ಯಕ್ಷರಾಗಿ ವಿ4 ಚಾನೆಲ್ ನ ಕೆ ಎಂ ಖಲೀಲ್ , ಜೊತೆ ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ಜಗದೀಶ್ ಅಂಡಾರು ಅಯ್ಕೆಯಾಗಿದ್ದಾರೆ .

ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಮ್ಮ ಟಿವಿ ವರದಿಗಾರ ಅರುಣ್ ಭಟ್ ಭಟ್ ಕೈಲಾಜೆ, ಮಾಧ್ಯಮಬಿಂಬ ವರದಿಗಾರ ಹರೀಶ್ ಆಚಾರ್ಯ, ಪ್ರಜಾವಾಣಿ ವರದಿಗಾರ ವಾಸುದೇವ ಭಟ್, ಉದಯವಾಣಿ ವರದಿಗಾರ ಅವಿನಾಶ್ ಬಿ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಜಿಲ್ಲಾ ಪತ್ರಕರ್ತರಾ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಜಿ ಕುರ್ಯ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಕಾರ್ಯ ನಿರ್ವಹಿಸಿದರು.

Related posts

ಇಂದು ಕುಂದೇಶ್ವರ ಉತ್ಸವ- ನಾಳೆ ಕುಂದೇಶ್ವರ ಪ್ರಶಸ್ತಿ ಪ್ರದಾನ

Madhyama Bimba

ಭಾರತ ವಾಲಿಬಾಲ್ ತಂಡದ ನಾಯಕಿಯಾಗಿ ಕಾರ್ಕಳದ ಶಗುನ್ ಎಸ್ ವರ್ಮ

Madhyama Bimba

ಮುದ್ರಾಡಿಯಲ್ಲಿ ಮಾದಕ ವ್ಯಸನ ಜಾಗೃತಿ ಕಾರ್ಯಾಗಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More