ಕಾರ್ಕಳಹೆಬ್ರಿ

ಸಾಲು ಮರದ ತಿಮ್ಮಕ್ಕನ ಜನ್ಮದಿನದಂದು ಬೈಲೂರಿನಲ್ಲಿ ಹಸಿರು ಸಂದೇಶ ಸಾರಿದ ಕಾರ್ಕಳ ಜ್ಞಾನಸುಧಾದ ವಿದ್ಯಾರ್ಥಿಗಳು

ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣದ ಉದ್ದೇಶದಿಂದ ಬೈಲೂರು ಪೇಟೆಯಲ್ಲಿ ಕಾರ್ಕಳ ಜ್ಞಾನಸುಧಾಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಜೂ.30ರಂದು ರಿಕ್ಷಾಚಾಲಕರಿಗೆ ಬೀಜದುಂಡೆಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸಿದರು.


ಕಾರ್ಕಳ ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷರು ಹಾಗೂ ವಕೀಲರಾದ ಸದಾನಂದ ಸಾಲಿಯಾನ್ ರಿಕ್ಷಾಚಾಲಕರು ಸಂಚಾರದ ವೇಳೆ ರಸ್ತೆ ಬದಿಗಳು, ಖಾಲಿ ಜಾಗಗಳು, ಹಾಗೂ ಮರಗಳ ಕೊರತೆಯಿರುವ ಪ್ರದೇಶಗಳಲ್ಲಿ ಬೀಜದುಂಡೆಗಳನ್ನು ಎಸೆಯುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ಮನವಿ ಮಾಡಿದರು.


ಈ ಸಂದರ್ಭದಲಿ ರಿಕ್ಷಾಚಾಲಕರು ವಿದ್ಯಾರ್ಥಿಗಳ ಪರಿಸರ ಕಾಳಜಿಯನ್ನು ಮೆಚ್ಚಿ, ಬೀಜದುಂಡೆಗಳನ್ನು ಸೂಕ್ತ ಸ್ಥಳಗಳಲ್ಲಿ ಬಿತ್ತರಿಸಿ ಹಸಿರು ಪರಿಸರ ನಿರ್ಮಾಣಕ್ಕೆ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ತೋಟಗಾರಿಕಾ ಇಲಾಖೆಯ ರಮೇಶ್ ಉಳ್ಳಾಗಡ್ಡಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಈ ವಿನೂತನ ಹಸಿರು ಅಭಿಯಾನ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮನೋಜ್, ಶಿಕ್ಷಕಿಯರಾದ ಗಾಯತ್ರಿ, ಪುಷ್ಪಲತಾ, ಶ್ವೇತಾ ಸಹಕರಿಸಿದರು.

Related posts

ನಿತ್ಯಾಧಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಹಾಸಭೆ

Madhyama Bimba

ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಜಿಲ್ಲಾ ಬ್ಯಾಂಕಿನ ಪ್ರಶಸ್ತಿ

Madhyama Bimba

ಕಾರ್ಕಳ ಆನೆಕೆರೆಯಲ್ಲಿ ಎಸ್.ಕೆ.ಪಿ.ಎ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More