ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಪಿಯುಸಿ ಸಾಧಕರಿಗೆ ಸನ್ಮಾನ

ಕಾರ್ಕಳ: ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರೋಟರಿ ಕ್ಲಬ್ ಕಾರ್ಕಳ ಸದಸ್ಯರ ಮಕ್ಕಳನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.’


ರೋಟೇರಿಯನ್ ಡಾ. ಪ್ರಭಾ ಹಾಗೂ ರೋಟೇರಿಯನ್ ನಿರಂಜನ್ ಜೈನ್ ಅವರ ಪುತ್ರ ಆಶಯ್ ಜೈನ್ 98.83% ಅಂಕಗಳೊಂದಿಗೆ 6ನೇ ರ್‍ಯಾಂಕ್, ರೋಟೇರಿಯನ್ ಶ್ರೀಮತಿ ಪ್ರೀತಿ ಶೆಟ್ಟಿ ಮತ್ತು ರೋಟೇರಿಯನ್ ದಿವಾಕರ್ ಶೆಟ್ಟಿ ಅವರ ಪುತ್ರಿ ಶರದಿ ಶೆಟ್ಟಿ 98.33% ಅಂಕಗಳೊಂದಿಗೆ 10ನೇ ರ್‍ಯಾಂಕ್ ಹಾಗೂ ಶ್ರೀಮತಿ ಅಶ್ವಿನಿ ಮತ್ತು ರೋಟೇರಿಯನ್ ವೇಣುಗೋಪಾಲ್ ಅವರ ಪುತ್ರ ಶ್ರೀವತ್ಸ ವಿ. 94% ಅಂಕಗಳನ್ನು ಪಡೆದು ಸಾಧನೆಗೈದ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಾಧಕರನ್ನು ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿ, ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹಾರೈಸಿದರು.

 


ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು, ಪೋಷಕರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Related posts

ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾಗಿ ಮಾಲಿನಿ ಜೆ. ಶೆಟ್ಟಿ – ಕಾರ್ಯದರ್ಶಿಯಾಗಿ ಜ್ಯೋತಿ ರಮೇಶ್‌

Madhyama Bimba

ನಕ್ರೆ ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕ

Madhyama Bimba

ಬಂಟರ ಯಾನೆ ನಾಡವರ ಸಂಘದ ಉಡುಪಿ ತಾಲೂಕು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರವೀಂದ್ರ ಹೆಗ್ಡೆ ಅವಿರೋಧ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More