ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ ಇಲ್ಲಿ ಬ್ರಹ್ಮಕುಂಭಾಭಿಷೇಕ ಶ್ರೀ ರಂಗ ಪೂಜಾ ಮಹೋತ್ಸವವು ಏ. 19ರಿಂದ ಆರಂಭಗೊಂಡು ಏ 24ರವರೆಗೆ ಪರ್ಯಂತ ನಡೆಯಲಿದೆ.

ಉಡುಪಿ ಪುತ್ತೂರು ಬ್ರಹ್ಮಶ್ರೀ ಹಯವದನ ತಂತ್ರಿಗಳ ಹಾಗೂ ವಿದ್ವಾನ್ ಶ್ರೀ ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕುಂಭಾಭಿಷೇಕದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.



ಏ. 19ರಂದು ಸಂಜೆ 4.00ರಿಂದ ಪರಪು ಜಂಕ್ಷನ್‌ನಿಂದ ಶ್ರೀ ದೇವಸ್ಥಾನಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.


ಏ.20ರಂದು ಬೆಳಗ್ಗೆ 7.30ಕ್ಕೆ ಪ್ರಾರ್ಥನೆ, ಪುಣ್ಯಾಹ ದೇವನಾಂದಿ, ಅರಣೀಮಥನ, ಅಗ್ನಿಜನನ ಆದ್ಯಗಣ ಯಾಗ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ನವಗ್ರಹಯಾಗ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 4.30 ರಿಂದ ವಾಸ್ತುಹೋಮ, ರಾಕ್ಷೋಘ್ನ ಹೋಮ, ಪ್ರಾಸಾದಶುದ್ಧಿ, ಸಪ್ತಶುದ್ದಿ, ಭೂಶುದ್ದಿಹೋಮ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ಮಾರ್ಗದರ್ಶ ಕರಾದ ಡಾ| ಸೋಂದಾ ಭಾಸ್ಕರ್ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ದೇವಸ್ಥಾನದ ಆಡಳಿತ ಮೋಕ್ತಸರರಾದ ನಕ್ರೆ ವರ್ಣಬೆಟ್ಟು ಎನ್ ಮುತ್ತಯ್ಯ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳದ ಪೋಲಿಸ್ ಉಪಾಧೀಕ್ಷಕರಾದ ಎಸ್. ವಿಜಯ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿ.ಪ್ರಾ ಶಾಲೆ ಹಾಗೂ ಸರಕಾರಿ ಪ್ರೌಢ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಶಾಲ ಯಕ್ಷಕಲಾ ಬಳಗ ನಂದಳಿಕೆ ಇವರಿಂದ ಯಕ್ಷಗಾನ ತಾಳ ಮದ್ದಳೆ ನಡೆಯಲಿದೆ.



ಏ. 21ರಂದು ಬೆಳಗ್ಗೆ 7.30ಕ್ಕೆ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಬಿಂಬ ಶುದ್ದಿ, ಅಷ್ಟಬಂಧ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 4.30 ರಿಂದ ಪಾರ್ವತಿ ಗಣಪತಿ ದೇವರಿಗೆ ಪಂಚ ವಿಂಶತಿ ಕಲಶಾಧಿವಾಸ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6.30 ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಧಾರ್ಮಿಕ ಚಿಂತಕರು ಮತ್ತು ಪ್ರವಚನಾಕರರಾದ ಎನ್. ಆರ್, ದಾಮೋದರ ಶರ್ಮ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಕ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳಾದ ಶ್ರೀಮತಿ ಡಾ. ವಿದ್ಯಾ ಎಸ್. ಕಿದಿಯೂರು ಭಾಗವಹಿಸಲಿದ್ದಾರೆ. ರಾತ್ರಿ 7.30 ರಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಂದ ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ಕದಂಬ ಸಾಮಾಜಿಕ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಏ. 22ರಂದು ಬೆಳಗ್ಗೆ 7.30ಕ್ಕೆ ಪಾರ್ವತಿ-ಗಣಪತಿ ದೇವರಿಗೆ ಕಲಶಾಭಿಷೇಕ, ಶ್ರೀ ಮಹಾಲಿಂಗೇಶ್ವರ ದೇವರಿಗೆ ತತ್ವಹೋಮ, ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 4.30 ರಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ 108 ಕಲಶಾಧಿವಾಸ, ಅಧಿವಾಸಹೋಮ, ಪರಿವಾರ ದೇವರಿಗೆ ಕಲಶಾಧಿವಾಸ, ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 7.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಹಿಂದೂ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ನಕ್ರೆ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಜಯ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ 9.00 ರಿಂದ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ ಕಳವಾರು, ಮಂಗಳೂರು ಇವರಿಂದ ಯಕ್ಷಗಾನ ನಾಟ್ಯ ನಿರ್ಮಲೆ ಪ್ರದರ್ಶನಗೊಳ್ಳಲಿದೆ.
ಏ. 23 ರಂದು ಬೆಳಗ್ಗೆ 6.30 ಕ್ಕೆ ಶ್ರೀ ಮಹಾಲಿಂಗೇಶ್ವರ ಹಾಗೂ ಪರಿವಾರ ದೇವರಿಗೆ ಕಲಶಾಭಿಷೇಕ ಪ್ರಾರಂಭವಾಗಿ ಗಂಟೆ 8.45 ರ ಸುಮುಹೂರ್ತದಲ್ಲಿ ಪ್ರಧಾನ ಕುಂಭಾಭಿಷೇಕ ಪೂಜೆ, ಮಹಾಪೂಜೆ, ನಡೆಯಲಿದೆ. ನಂತರ ಮಹಾ ಅನ್ನಸಂತರ್ಪಣೆ, ಸಂಜೆ 4.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದೇವಸ್ಥಾನದ ಆಡಳಿತ ಮೋಕ್ತಸರರಾದ ನಕ್ರೆ ವರ್ಣಬೆಟ್ಟು ಎನ್. ಮುತ್ತಯ್ಯ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ನಕ್ರೆ ಚರ್ಚ್‌ನ ಧರ್ಮಗುರುಗಳಾದ ವಂ. ಲೂಯಿಸ್ ಡೇಸಾ, ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ಹಯವದನ ತಂತ್ರಿ, ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಎನ್. ರಮೇಶ್ ಭಟ್, ನಕ್ರೆ ನಿವೃತ್ತ ಶಿಕ್ಷಕರಾದ ಎನ್. ಬಿಪಿನ್ ಚಂದ್ರಪಾಲ್ ಭಾಗವಹಿಸಲಿದ್ದಾರೆ. ರಾತ್ರಿ 7.30 ರಿಂದ ರಂಗಪೂಜೆ, ದೀಪಾ ರಾದನೆ, ಉತ್ಸವ ಬಲಿ ನಡೆಯಲಿದೆ.
ಏ.24ರಂದು ಬೆಳ್ಳಿಗೆ 7.30ಕ್ಕೆ ಶುದ್ಧ ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
