ಕಾರ್ಕಳ

ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಯನ್ನು ‘ಮಾನನಷ್ಟ’ ಎಂದು ಬಿಂಬಿಸುವ ಪ್ರಯತ್ನಕ್ಕೆ ಮಾನ್ಯ ಹೈಕೋರ್ಟ್ ತಡೆಯಾಜ್ಞೆ

​ಕಾರ್ಕಳದ ಯುವ ಕಾಂಗ್ರೆಸ್ ಮುಖಂಡರಾದ ಯೋಗೀಶ್ ಆಚಾರ್ಯ ಇನ್ನಾ ಅವರ ವಿರುದ್ಧ ಹೂಡಲಾಗಿದ್ದ ಸುಳ್ಳು ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ, ಮಾನ್ಯ ಹೈಕೋರ್ಟ್ ಇಂದು ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ.

​ಪ್ರಕರಣದ ಹಿನ್ನೆಲೆ ಮತ್ತು ವಾಸ್ತವಾಂಶ: ಕಳೆದ 2020ರ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕಾರ್ಕಳ ತಾಲೂಕಿನಲ್ಲಿ ಕಾರ್ಯಾಚರಿಸುವ ಗೇರುಬೀಜ ಕಾರ್ಖಾನೆಗಳಿಗೆ ಜಿಲ್ಲಾಡಳಿತವು ವಿಶೇಷ ವಿನಾಯಿತಿ ನೀಡಿತ್ತು. ಈ ಕುರಿತು ‘ಕನ್ನಡಪ್ರಭ’ ಸೇರಿದಂತೆ ಪ್ರಮುಖ ದಿನಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಆ ಸಮಯದಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುವ ಕಾರ್ಖಾನೆಗಳಿಗೆ ವಿನಾಯಿತಿ ನೀಡುವುದರಿಂದ ಕೊರೋನಾ ಸೋಂಕು ಹರಡುವ ಭೀತಿಯನ್ನು ಸಾರ್ವಜನಿಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದರು.
​ಈ ಪತ್ರಿಕಾ ವರದಿಗಳನ್ನು ಆಧರಿಸಿ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮತ್ತು ಸರ್ಕಾರದ ತಾರತಮ್ಯದ ನೀತಿಯನ್ನು ಪ್ರಶ್ನಿಸಿ ಯೋಗೀಶ್ ಇನ್ನಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್‌ನಲ್ಲಿ ಯಾವುದೇ ಅಸಂವಿಧಾನಿಕ, ಅಶ್ಲೀಲ ಅಥವಾ ವೈಯಕ್ತಿಕ ನಿಂದನೆಯ ಪದಗಳನ್ನು ಬಳಸದೆ, ಕೇವಲ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಶಾಸಕರನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಲಾಗಿತ್ತು.

​ದಬ್ಬಾಳಿಕೆಯ ವಿರುದ್ಧ ಕಾನೂನು ಜಯ: ಯೋಗೀಶ್ ಆಚಾರ್ಯ ಇನ್ನಾ ಅವರು ಎತ್ತಿದ ಸಾರ್ವಜನಿಕ ಹಿತಾಸಕ್ತಿಯ ಈ ಪ್ರಶ್ನೆಯನ್ನು ‘ಮಾನನಷ್ಟ’ ಎಂದು ತಪ್ಪಾಗಿ ವ್ಯಾಖ್ಯಾನಿಸಿ, ಯೋಗೀಶ್ ಆಚಾರ್ಯ ಇನ್ನಾ ಅವರ ಧ್ವನಿಯನ್ನು ಹತ್ತಿಕ್ಕಲು ಶಾಸಕರು ಕಾನೂನು ಕ್ರಮದ ಮೊರೆ ಹೋಗಿದ್ದರು.

 

ಈ ಸಂಬಂದ ಯೋಗೀಶ್ ಆಚಾರ್ಯ ಇನ್ನಾ ಅವರು ಕಾರ್ಕಳ ಶಾಸಕರ ಬಳಿ ಕ್ಷಮೆ ಯಾಚಿಸಬೇಕು ಮತ್ತು ದಂಡದ ಮೊತ್ತವನ್ನು ಪಾವತಿಸಬೇಕೆಂದು ಆದೇಶ ಹೊರಡಿಸಿದ್ದು ತಪ್ಪಿದ್ದಲ್ಲಿ ಬಂಧನಕ್ಕೆ ಒಳಗಾಗಬೇಕಾಗಿತ್ತು.

ಯೋಗೀಶ್ ಆಚಾರ್ಯ ಇನ್ನಾ ಅವರ ಬಂಧನಕ್ಕೆ ನ್ಯಾಯಾಲಯ 7.03.2026 ರಂದು ಹೊರಡಿಸಿತ್ತು. ಹೈಕೋರ್ಟ್ ವಕೀಲರಾದ ಶ್ರೀಕಾಂತ್.ವಿ.ಕೆ ಅವರು ಯೋಗೀಶ್ ಆಚಾರ್ಯ ಇನ್ನಾ ಅವರ ಪರವಾಗಿ ವಾದಿಸಿದ್ದು ಇದೀಗ ಮಾನ್ಯ ಉಚ್ಚ ನ್ಯಾಯಾಲಯವು ( Petition No: 12163/2026) ಇಂದು ಈ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.

​ಯೋಗೀಶ್ ಆಚಾರ್ಯ ಇನ್ನಾ ಅವರ ಹೇಳಿಕೆ:
“ಪತ್ರಿಕಾ ವರದಿಗಳ ಆಧಾರದ ಮೇಲೆ ಸಾರ್ವಜನಿಕರ ಪರವಾಗಿ ಪ್ರಶ್ನೆ ಕೇಳುವುದು ಪ್ರಜಾಪ್ರಭುತ್ವದಲ್ಲಿ ನನ್ನ ಹಕ್ಕು. ನಾನು ಯಾವುದೇ ಅಸಂವಿಧಾನಿಕ ಪದಗಳನ್ನು ಬಳಸಿಲ್ಲ. ಸತ್ಯವನ್ನು ಮರೆಮಾಚಲು ನನ್ನ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿತ್ತು. ಮಾನ್ಯ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯು ರಾಜಕೀಯ ದ್ವೇಷ ಸಾಧಿಸುವವರಿಗೆ ಬಿದ್ದ ದೊಡ್ಡ ಪೆಟ್ಟಾಗಿದೆ. ನ್ಯಾಯಾಂಗದ ಮೇಲೆ ನಮಗೆ ಅಚಲವಾದ ವಿಶ್ವಾಸವಿದೆ.”
ನನಗೆ ಈ ಕ್ಲಿಷ್ಟಕರ ಸಮಯದಲ್ಲಿ ನನ್ನೊಂದಿಗೆ ನಿಂತ,ಪಕ್ಷದ ನಾಯಕರಾದ ,ಮುನಿಯಾಲು ಉದಯಶೆಟ್ಟಿ,ಬ್ಲಾಕ್ ಅಧ್ಯಕ್ಷರಾದ ಶುಭದರಾವ್ ಅವರಿಗೆ ಹಾಗೂ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು‌ ಸಲ್ಲಿಸುತ್ತೇನೆ.
​ಜನಸಾಮಾನ್ಯರ ಪರವಾಗಿ ದ್ವನಿ ಎತ್ತುವ ನಮ್ಮ ಹೋರಾಟ ಇಂತಹ ಬೆದರಿಕೆಗಳಿಗೆ ಅಂಜದೆ ಮುಂದುವರಿಯಲಿದೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.

Related posts

ನಿಟ್ಟೆ ಡಾ. ವಿನಯ ಹೆಗ್ಡೆ ಅಗಲುವಿಕೆಗೆ ಉದಯ ಶೆಟ್ಟಿ ಮುನಿಯಾಲು ತೀವ್ರ ಸಂತಾಪ

Madhyama Bimba

ನಾಗರಾಜ್ ಕಾಡುಹೊಳೆ ಅವರಿಗೆ ಕೋಸ್ಟಲ್ ಕಾಮಿಡಿ ಸ್ಟಾರ್ ೨ನೇ ರನ್ನರ್ ಆಪ್ ಪ್ರಶಸ್ತಿ

Madhyama Bimba

ಮುದ್ರಾಡಿಯಲ್ಲಿ ನೇತಾಜಿ ಪ್ರತಿಮೆಗೆ ನಮನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More