ಕಾರ್ಕಳಹೆಬ್ರಿ

ಅಜೆಕಾರು: ಕಾಡುಹೊಳೆಯಿಂದ ವ್ಯಕ್ತಿ ನಾಪತ್ತೆ- ಮಾಹಿತಿ ತಿಳಿದರೆ ಅಜೆಕಾರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ

ಅಜೆಕಾರು: ಕಾಡುಹೊಳೆಯಿಂದ ವ್ಯಕ್ತಿಯೋರ್ವರು ನಾಪತ್ತೆಯಾಗಿದ್ದು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.


ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸಮನವಳ್ಳಿ ಗ್ರಾಮ ಹನುಮಂತಪ್ಪ (50) ಕಾಣೆಯಾದವರು.

ಹನುಮಂತಪ್ಪ ಇವರು ಮರ್ಣೆ ಗ್ರಾಮದ ಕಾಡುಹೊಳೆ ಜನಪ್ರಿಯ ರೈಸ್‌ಮಿಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ವಾಸ್ತವ್ಯವಿದ್ದರು.

ಮಾ. 25ರಂದು ಸಂಜೆ 7 ಗಂಟೆಗೆ ಉಡುಪಿಗೆ ಹೋಗಿ ಬರುತ್ತೇನೆಂದು ಹೋಗಿದ್ದು, ಮಾ. 26ರಂದು ಅವರ ಮೊಬೈಲ್‌ಗೆ ಕರೆ ಮಾಡಿದಾಗ ಉಡುಪಿಯಲ್ಲಿ ಇರುವುದಾಗಿ ತಿಳಿಸಿದ್ದರು. ಆದರೆ, ನಂತರ ಪೋನ್ ಸ್ವೀಚ್ ಆಫ್ ಆಗಿದ್ದು, ಊರಿನಲ್ಲಿ ಮತ್ತು ಉಡುಪಿಯಲ್ಲಿರುವ ಸಂಬಂಧಿಕರಲ್ಲಿ ವಿಚಾರಿಸಿದಾಗ ಅವರ ಮಾಹಿತಿ ದೊರೆಯದೇ ಇದ್ದು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ: ವೆಸ್ಟರ್ನ್ ವತಿಯಿಂದ ಈಸ್ಟರ್ನ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್

Madhyama Bimba

ಕುಕ್ಕುಂದೂರು ಅರ್ಬಿಪಾದೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ: ಪ್ರಕರಣ ದಾಖಲು

Madhyama Bimba

ಪಳ್ಳಿ ಸರಕಾರಿ ಪ. ಪೂ. ಕಾಲೇಜಿಗೆ ಶೇ. 100 ಫಲಿತಾಂಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More