Blog

ಇಂದು ಮಂಜಲ್ಪಾದೆಯಲ್ಲಿ ಬ್ರಹ್ಮ ಕಲಶೋತ್ಸವ

ಬಜಗೋಳಿಯ ಮಂಜಲ್ಪಾದೆಯಲ್ಲಿ ಇಂದು ಧರ್ಮ ದೈವಗಳ ಪ್ರತಿಷ್ಠೆ ಬ್ರಹ್ಮ ಕಲಶ ಅಭಿಷೇಕ ನಡೆಯಲಿದೆ.

ಹಲವಾರು ದಶಕಗಳ ಇತಿಹಾಸ ಇರುವ ಈ ದೈವಸ್ಥಾನ ಇತ್ತೀಚಿನ ದಿನಗಳಲ್ಲಿ ಜೀರ್ಣೋದ್ದಾರಗೊಂಡಿತ್ತು.

ಏಪ್ರಿಲ್ 23ಗುರುವಾರ ಬೆಳಿಗ್ಗೆ ಗಂಟೆ 8.30ರಿಂದ ಧರ್ಮ ದೈವಗಳ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 11.20ರ ಮಿಥುನ ಲಗ್ನದಲ್ಲಿ ಬ್ರಹ್ಮ ಕಲಶಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ಗಂಟೆ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಯಂಕಾಲ 4.30ರಿಂದ ಭಜನೆ, ಸಾಯಂಕಾಲ 6 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 9 ಕ್ಕೆ ಧರ್ಮರಸು ನೆಲ್ಲಿರಾಯ ದೈವಗಳ ಗಗ್ಗರ ಸೇವೆ, ರಾತ್ರಿ ಗಂಟೆ 11 ಕ್ಕೆ ಮಹಾ ಕಾಳಿ ದೈವದ ಗಗ್ಗರ ಸೇವೆ, ಅಭಯದ ನುಡಿ ನಡೆಯಲಿದೆ.

ಏಪ್ರಿಲ್ 24 ಶುಕ್ರವಾರ ರಾತ್ರಿ 8.30ಕ್ಕೆ ಮುಗೇರ ಸತ್ಯಗಳಾದ ಎಣ್ಮೂರ ದೆಯುಕೆಲದ ಪೆರ್ಣ ಭದ್ರ ಕಡೆಂಜು ದೈವಗಳ ನೇಮೋತ್ಸವ.

ರಾತ್ರಿ ಗಂಟೆ 10ಕ್ಕೆ ಎಣ್ಮೂರ ದೈಯೂನ ತಂಗಡಿ ಶಕ್ತಿ ಸ್ವರೂಪಿಣಿ ತನ್ನಿ ಮಾನಿಗ ದೈವಗಳ ನೇಮೋತ್ಸವ ನಡೆಯಲಿದೆ.

ಏಪ್ರಿಲ್ 25ರಂದು ಬೆಳಿಗ್ಗೆ ಗಂಟೆ 7 ಕ್ಕೆ ಸ್ವಾಮಿ ಕೊರಗಜ್ಜ ದೈವದ ಗಗ್ಗರ ಸೇವೆ, ಅಭಯದ ನುಡಿ ಮಧ್ಯಾಹ್ನ ಗಂಟೆ 12 ಕ್ಕೆ ಧರ್ಮ ದೈವ ಹಲೇರ ಪಂಜುರ್ಲಿ ದೈವದ ಗಗ್ಗರ ಸೇವೆ ಹಾಗೂ ಅಭಯದ ನುಡಿ ನಡೆಯಲಿದೆ

Related posts

ನಾನಿಲ್ತಾರ್ ಕುಲಾಲ ಸಂಘದ ಕ್ರೀಡಾಕೂಟ

Madhyama Bimba

ಆತ್ಮಹತ್ಯೆ

Madhyama Bimba

ಪೊಲೀಸ್ ಇನ್ಸ್ಪೆಕ್ಟರ್ ನಾಸಿರ್ ಹುಸೇನ್ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More