Blog

ಕಾರ್ಕಳ: ವಿದ್ಯುತ್ ಕಂಬದಿಂದ ಬಿದ್ದು ವ್ಯಕ್ತಿ ಮೃತ್ಯು

ಕಾರ್ಕಳ: ವ್ಯಕ್ತಿಯೋರ್ವರು ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಜ. 14ರಂದು ವರದಿಯಾಗಿದೆ.

ಅಸ್ಸಾಂನ ಸ್ವಂಕಾರ್ ಬಸುಮತ್ರಿ (29) ಮೃತಪಟ್ಟವರು.


ಇವರು ಹೆಬ್ರಿಯ ಶಿವಪುರದ ಶಿವ ಎಲೆಕ್ಟ್ರಿಕಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಇವರು ಬಜಗೋಳಿಯ ಅಬ್ಬೆಂಜಾಲು ಎಂಬಲ್ಲಿ ಹಳೆ ಕೆ.ಇ.ಬಿ. ಕಂಬದ ಪಕ್ಕದಲ್ಲಿ ಹೊಸದಾಗಿ ಕೆ.ಇ.ಬಿ. ಕಂಬ ಅಳವಡಿಸಿ, ಕಂಬದಲ್ಲಿ ಕೆಲಸ ಮಾಡಿಕೊಂಡಿರುವಾಗ ವಿಪರೀತ ಸಿಡಿಲು, ಗುಡುಗು, ಮಳೆ ಬರುತ್ತಿದ್ದು ಈ ಸಮಯ ಸಿಡಿಲು ಯಾ ಇತರೇ ಕಾರಣದಿಂದ ಅಕಸ್ಮಿಕವಾಗಿ ವಿದ್ಯುತ್ ಕಂಬದ ಮೇಲಿನಿಂದ ಕೆಳಕ್ಕೆ ಬಿದ್ದು, ತೀವ್ರ ಅಸ್ವಸ್ಥಗೊಂಡ ಇವರನ್ನು ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ.ಎ. ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಗಾಯಾಳು ಸ್ವಂಕಾರ್ ಬಸುಮತ್ರಿ ಇವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.

ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

Related posts

ಮಿಯ್ಯಾರುನಲ್ಲಿ ಭೀಕರ ರಸ್ತೆ ಅಪಘಾತ – ರಸ್ತೆ ಸಮಸ್ಯೆ – ಹೋರಾಟದ ಎಚ್ಚರಿಕೆ ನೀಡಿದ ಶೇಕ್ ಶಬೀರ್

Madhyama Bimba

ಈದುವಿನಲ್ಲಿ ಧರ್ಮಸ್ಥಳ ಸಂಘದ ಸಂಭ್ರಮ ಆಚರಣೆ

Madhyama Bimba

ಮುಂಡ್ಲಿ ಜಲಾಶಯದಲ್ಲಿ ರೂ 24 ಲಕ್ಷ ಮೌಲ್ಯದ ಸೊತ್ತು ಕಳವು – ಇಬ್ಬರ ಮೇಲೆ ಕೇಸು ದಾಖಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More