ಕಾರ್ಕಳ

ಜ್ಞಾನಸುಧಾ: ಎಸ್.ಎಸ್.ಎಲ್.ಸಿ. ಫಲಿತಾಂಶ – 02 ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ- 11 ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಹತ್ತರೊಳಗಿನ ಸ್ಥಾನ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮಹಾಲಕ್ಷ್ಮೀ ಭಾಗವ್ ಮತ್ತು ಮಹಾಲಕ್ಷ್ಮೀ ಪೈ ಬಿ 624ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಶಾಲೆಗೆ ಪ್ರಥಮ ಸ್ಥಾನಪಡೆದುಕೊಂಡಿರುತ್ತಾರೆ.

ವೈಷ್ಣವಿ ಶೆಟ್ಟಿಗಾರ್ 623 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಆರುಷಿ ಪೂಜಾರಿ 622 ಅಂಕಗಳೊಂದಿಗೆ ತೃತೀಯ ಸ್ಥಾನ ಹಾಗೂ ಧೃತಿ ಎಸ್. ನಾಯಕ್ (619), ಪ್ರಶ್ಮಾ ಮೋಹನ್ ಕುಮಾರ್ (619), ರಚನಾ ಪೈ (619) ವರ್ಷಾ ಆರ್. ಎಸ್. (619), ಆಪ್ತಾ ಜೈನ್ (618), ಅನ್ವಿ ಹೆಚ್. ಅಂಚನ್ (616), ಉತ್ತಮ್ ಭಟ್ (616), ರೋಹನ್ ಕೆ. ಶಿವರುದ್ರಪ್ಪ(615), ವಿಘ್ನೇಶ್ ನಾಯಕ್ (614), ಸಾಕ್ಷಿ ಶೆಟ್ಟಿ (612), ವಿಯೋಲಾ ಮೆಂಡೊನ್ಸಾ (611), ರಿತಿಕಾ ಶೆಟ್ಟಿ (610), ಸಿಂಚನಾ ರಾವ್ (609), ಸನತ್ ಪ್ರಭು(608), ದ್ವಿತಿ ಶೆಟ್ಟಿ (607), ಪ್ರಕೃತಿ ಪ್ರಮೋದ್ ನಾಯ್ಕ್(607), ಭುವನ್ ಶೆಟ್ಟಿ(606), ಆದ್ಯಾ ಶೆಟ್ಟಿ (605), ಸುಯೋಗ್ ಎಸ್.ಎನ್. (605), ಅದಿತಿ ನಾಯಕ್ (602), ಸನತ್ ನಾಯಕ್ (602), ತೇಜಸ್ ನಾಯಕ್ (602), ಆದ್ಯಾ(600), ಅಂಕಿತಾ ಶೆಟ್ಟಿ (600), ಹಿಮಾನಿ ಶೆಟ್ಟಿ (600), ಕ್ಷಮಿತಾ ಕೃಷ್ಣ ಶೇರಿಗಾರ್ (600) ಅಂಕ ಪಡೆದುಕೊಂಡಿರುತ್ತಾರೆ.

ರಾಜ್ಯದ ಮೊದಲ ಹತ್ತು ಸ್ಥಾನಗಳಲ್ಲಿ ಸಂಸ್ಥೆಯ 11 ವಿದ್ಯಾರ್ಥಿಗಳು ಗುರುತಿಸಿಕೊಂಡಿರುತ್ತಾರೆ.

116 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ.100 ಫಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ 116 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು 613 (98%)ಕ್ಕಿಂತ ಅಧಿಕ ಅಂಕಗಳನ್ನು, 30 ವಿದ್ಯಾರ್ಥಿಗಳು 600 (96%) ಕ್ಕೂ ಹೆಚ್ಚು ಅಂಕಗಳನ್ನು, 37 ವಿದ್ಯಾರ್ಥಿಗಳು 595 (95%)ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ. 79 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. 95 ಉತ್ತರಪತ್ರಿಕೆಗಳು 100ಕ್ಕೆ 100 ಅಂಕಗಳನ್ನು ಪಡೆದಿರುತ್ತದೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದಿಸಿರುತ್ತಾರೆ.

Related posts

ಎಪ್ರಿಲ್‌ 05 ರಿಂದ 10:  ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಶ್ರೀಕ್ಷೇತ್ರದಲ್ಲಿ ಆದಿಮುದ್ರೋತ್ಸವ

Madhyama Bimba

ಅಮೃತಭಾರತಿ ಶಿಕ್ಷಕರಿಗೆ ವಿವಿಧ ಪ್ರಶಸ್ತಿ

Madhyama Bimba

ಕಾರ್ಕಳ: ಯರ್ಲಪಾಡಿಯ ಯುವಕ ಅನಾರೋಗ್ಯದಿಂದ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More