ಕಾರ್ಕಳ

ಎಳ್ಳಾರೆ ಮಾವಿನಕಟ್ಟೆ : ಹಲವಾರು ದಿನಗಳಿಂದ ನೀರಿಗಾಗಿ ಪರದಾಟ. !- ಮನೆಮನೆಗೆ ನೀರು ಸರಬರಾಜು ಮಾಡಿದ ಸಮಾಜಸೇವಕ ಗೋಪಿನಾಥ ಭಟ್

ಹೆಬ್ರಿ : ಕಡ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳ್ಳಾರೆ ಮಾವಿನಕಟ್ಟೆಯ ಹಲವಾರು ಮನೆಮಂದಿಗೆ ಕಳೆದ 1 ತಿಂಗಳಿನಿಂದ ನೀರಿನ ಸಮಸ್ಯೆ ಕಾಡಿತ್ತು. ನೀರಿನ ವ್ಯವಸ್ಥೆಗಳೇ ಇಲ್ಲವಾಗಿತ್ತು. ಇದರಿಂದ ಮಕ್ಕಳು ಸೇರಿ ಮನೆಮಂದಿ ಹೈರಣಾಗಿದ್ದರು. ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ ಯಾವೂದೇ ಪ್ರಯೋಜನಕ್ಕೆ ಬರಲಿಲ್ಲ. ಸ್ಥಳೀಯ ಗ್ರಾಮಸ್ಥರಾದ ನಾರಾಯಣ ಆಚಾರ್ಯ ಗರ್ಧರಬೆಟ್ಟು ಮತ್ತು ಶೇಖರ ನಾಯ್ಕ್ ಪಾಲ್ಜಡ್ಡು ವಿಶೇಷ ಮುತುವರ್ಜಿಯಿಂದ ಸಾಮಾಜಿಕ ಮುಂದಾಳು ಸಮಾಜಸೇವಕ ಮುನಿಯಾಲಿನ ಗೋಪಿನಾಥ ಭಟ್ ಮಾವಿನಕಟ್ಟೆ ಜನರ ನೀರಿನ ಸಮಸ್ಯೆಯನ್ನು ಮನಗಂಡು ಟ್ಯಾಂಕರ್ ಮೂಲಕ ಮನೆಮನೆಗೆ ನೀರು ಸರಬರಾಜು ಮಾಡಿದ್ದಾರೆ.

ಸತತ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದ ಮಾವಿನಕಟ್ಟೆಯ ಜನರ ಮೊಗದಲ್ಲಿ ಸಂತಸ ಮೂಡಿದೆ. ನೀರಿನ ಭವಣೆ ತಪ್ಪಿದೆ. ಗೋಪಿನಾಥ ಭಟ್, ನಾರಾಯಣ ಆಚಾರ್ಯ ಮತ್ತು ಶೇಖರ ನಾಯ್ಕ್ ಪಾಲ್ಜಡ್ಡು ಅವರ ಉಪಕಾರವನ್ನು ನಾವು ಮರೆಯುವಂತಿಲ್ಲ ಎಂದು ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ನೀರಿನ ವ್ಯವಸ್ಥೆ ಕಲ್ಪಿಸಲು ಪ್ರಸನ್ನ ಶೆಟ್ಟಿ ಜಯಲೀಲಾ, ಶಂಕರ ಶೆಟ್ಟಿ ಮಾವಿನಕಟ್ಟೆ, ಸಂತೋಷ ಆಚಾರ್ಯ ಮಾವಿನಕಟ್ಟೆ, ಸುರೇಶ ನಾಯಕ್ ಪಾಲ್ಜಡ್ಡು ನೆರವಾಗಿದ್ದಾರೆ.

ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ :
ನಮ್ಮ ನೀರಿನ ಸಂಕಷ್ಟದ ಸಮಯದಲ್ಲಿ ಸಕಾಲದಲ್ಲಿ ಸ್ಪಂದಿಸಿ ಅಗತ್ಯ ನೆರವು ನೀಡಿರುವ ಗೋಪಿನಾಥ ಭಟ್ ಮುನಿಯಾಲು, ಯುವ ಪ್ರಮುಖರಾದ ನಾರಾಯಣ ಆಚಾರ್ಯ ಗರ್ಧರಬೆಟ್ಟು ಮತ್ತು ಶೇಖರ ನಾಯ್ಕ್ ಪಾಲ್ಜಡ್ಡು ಅವರ ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ. ಅವರಿಂದಾಗಿ ನಮಗೆ ನೀರಿನ ಸಮಸ್ಯೆ ದೂರವಾಗಿದೆ ಎಂದು ಪ್ರದೀಪ್ ಸಾಲ್ಯಾನ್ ಮಾವಿನಕಟ್ಟೆ ಕೃತಜ್ಞತೆ ಸಲ್ಲಿಸಿದ್ದಾರೆ.
                     – ಪ್ರದೀಪ್ ಸಾಲ್ಯಾನ್ ಮಾವಿನಕಟ್ಟೆ.

Related posts

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಮಮತ ಕೆ.

Madhyama Bimba

ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

Madhyama Bimba

ರಕ್ತದಾನ ಜಾತಿ ಧರ್ಮಗಳನ್ನು ಮೀರಿದ ಮಾನವೀಯ ಸೇವೆ: ಡಾ. ಮಂಜುನಾಥ್ ಎ.ಕೋಟ್ಯಾನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More