ಕಾರ್ಕಳಹೆಬ್ರಿ

ಹೆಬ್ರಿ ಮಲ್ಲಿಕಾ ಶೆಟ್ಟಿ ನಿಧನ

ಹೆಬ್ರಿ : ಹೆಬ್ರಿಯ ಪ್ರತಿಷ್ಠಿತ ಅನಂತ ಪದ್ಮನಾಭ (ಎಪಿಎಂ) ಸಮೂಹ ಸಂಸ್ಥೆಯ ಸ್ಥಾಪಕರಾಗಿದ್ದ ದಿ. ಸುಭೋದ್ ಬಲ್ಲಾಳ್ ಅವರ ಪುತ್ರಿ ಮಂಗಳೂರಿನ ಖ್ಯಾತ ವೈಧ್ಯ ಡಾ. ಸುಮಂತ್ ಶೆಟ್ಟಿ ಅವರ ಧರ್ಮಪತ್ನಿ ಮಲ್ಲಿಕಾ ಶೆಟ್ಟಿ (67) ಶುಕ್ರವಾರ ರಾತ್ರಿ 12:30 ಗಂಟೆಗೆ ನಿಧನರಾಗಿದ್ದಾರೆ. ಮೃತರಿಗೆ ಪತಿ ಹಾಗೂ ಇಬ್ಬರು ಗಂಡು ಮಕ್ಕಳು ಹಾಗೂ ಸಹೋದರರಾದ ಹೆಬ್ರಿ ಪ್ರವೀಣ್ ಬಲ್ಲಾಳ್ ಹಾಗೂ ಪ್ರಸಾದ್ ಬಲ್ಲಾಳ್ ಮತ್ತು ಅಪಾರ ಬಂಧು ಬಳಗ ಇದ್ದಾರೆ. ಶನಿವಾರ ( ಇಂದು 12 ಗಂಟೆ ಬಳಿಕ ಹೆಬ್ರಿಯ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬಳಿಕ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯ ಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ, ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಕರ್ನಾಟಕ ಸರ್ಕಾರದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಹೆ ಮಣಿಪಾಲದ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Related posts

ಕೆ.ಸಿ.ಇ.ಟಿ ಫಲಿತಾಂಶ -2026-ಜ್ಞಾನಸುಧಾದ ಎನ್. ಶ್ರೇಯಸ್‌ಗೆ ನಾಲ್ಕು ವಿಭಾಗಗಳಲ್ಲಿ ನಾಲ್ಕನೇ ರ್‍ಯಾಕ್ – ಇಂಜಿನಿಯರಿಂಗ್‌ನಲ್ಲಿ 25 ವಿದ್ಯಾರ್ಥಿಗಳಿಗೆ 500ರ ಒಳಗಿನ ರ್‍ಯಾಂಕ್ -28 ವಿದ್ಯಾರ್ಥಿಗಳಿಗೆ ಇತರ ವಿಭಾಗಗಳಲ್ಲಿ ನೂರರೊಳಗಿನ ರ್‍ಯಾಂಕ್

Madhyama Bimba

ವಸತಿ ಶಾಲೆ ಪ್ರವೇಶಾತಿ : ಅರ್ಜಿ ಆಹ್ವಾನ

Madhyama Bimba

ಹೆಬ್ರಿಯಲ್ಲಿ ಗೋಪಾಲ ಭಂಡಾರಿ ೭೫ನೇ ಜನ್ಮ ದಿನಾಚರಣೆ : ಸಾಧಕರ ಸನ್ಮಾನ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ. 

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More