ಕಾರ್ಕಳ

ಕೆ.ಸಿ.ಇ.ಟಿ ಫಲಿತಾಂಶ -2026-ಜ್ಞಾನಸುಧಾದ ಎನ್. ಶ್ರೇಯಸ್‌ಗೆ ನಾಲ್ಕು ವಿಭಾಗಗಳಲ್ಲಿ ನಾಲ್ಕನೇ ರ್‍ಯಾಕ್ – ಇಂಜಿನಿಯರಿಂಗ್‌ನಲ್ಲಿ 25 ವಿದ್ಯಾರ್ಥಿಗಳಿಗೆ 500ರ ಒಳಗಿನ ರ್‍ಯಾಂಕ್ -28 ವಿದ್ಯಾರ್ಥಿಗಳಿಗೆ ಇತರ ವಿಭಾಗಗಳಲ್ಲಿ ನೂರರೊಳಗಿನ ರ್‍ಯಾಂಕ್

ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಇಂಜಿನಿಯರಿಂಗ್ ವಿಭಾಗದಲ್ಲಿ 25 ವಿದ್ಯಾರ್ಥಿಗಳು 500ರೊಳಗಿನ ರ್‍ಯಾಂಕ್, 87 ವಿದ್ಯಾರ್ಥಿಗಳು 2 ಸಾವಿರದೊಳಗಿನ ರ್‍ಯಾಂಕ್ ಹಾಗೂ 201 ವಿದ್ಯಾರ್ಥಿಗಳು ಐದುಸಾವಿರದೊಳಗಿನ ರ್‍ಯಾಂಕ್ ಗಳಿಸಿದ್ದಾರೆ. ಜೊತೆಗೆ 28 ವಿದ್ಯಾರ್ಥಿಗಳು ಇಂಜಿನಿಯರಿಂಗ್‌ಯೇತರ ವಿಭಾಗಗಳಲ್ಲಿ ನೂರರೊಳಗಿನ ರ್‍ಯಾಂಕ್ ಪಡೆದಿದ್ದಾರೆ.

ಡಿ-ಫಾರ್ಮಾ, ಫಿಸಿಯೋಥೆರಪಿ, ಪ್ರಾಸ್ತೆಟಿಕ್ಸ್, ಆರ್ಥೋಟಿಕ್ಸ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗಗಳಲ್ಲಿ ಸಂಸ್ಥೆಯಎನ್. ಶ್ರೇಯಸ್ ೪ನೇ ರ್‍ಯಾಂಕ್ ಪಡೆದಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಸೋಹನ್‌ಗಿರಿರಡ್ಡಿ 25ನೇ ರ್‍ಯಾಂಕ್, ನಿಶಾನ್ ಎನ್ ಸಾಲ್ಯಾನ್ 76ನೇ ರ್‍ಯಾಂಕ್, ಸೃಜನ್ ಎನ್ 94ನೇ ರ್‍ಯಾಂಕ್, ಅಶ್ವಿನ್ ವಿ ಶೆಟ್ಟಿ 105ನೇ ರ್‍ಯಾಂಕ್, ಎನ್.ಎಸ್ ವಿವೇಕ್ 109ನೇ ರ್‍ಯಾಂಕ್, ಕನಿಷ್ಕ್ ಎಸ್ ಅಮೀನ್ 118ನೇ ರ್‍ಯಾಂಕ್, ಮಾಧವ ಕಾಮತ್ 127ನೇ ರ್‍ಯಾಂಕ್, ಮೇಧಾಂಶ್ ಎನ್.ಬಿ. 148ನೇ ರ್‍ಯಾಂಕ್, ಅನಿರುದ್ಧ್ ರವಿರಾಜ್ ಉಡುಪ 166ನೇ ರ್‍ಯಾಂಕ್, ಜೀವನ್‌ಎನ್ ಬಿ 223ನೇ ರ್‍ಯಾಂಕ್, ಅಭಿಷೇಕ್ ಡಿ.ಜಿ. 225ನೇ ರ್‍ಯಾಂಕ್, ವೈಷ್ಣವಿ ಕುಲಕರ್ಣಿ 250ನೇ ರ್‍ಯಾಂಕ್, ಸುಹಾಸ್ ಶೆಣೈ 252ನೇ ರ್‍ಯಾಂಕ್, ಮೋದಕ್ ಪಿ ಆರ್ 254ನೇ ರ್‍ಯಾಂಕ್, ಸಮ್ವಿದ್ ದಿನೇಶ್ ನಾಯಕ್ 277ನೇ ರ್‍ಯಾಂಕ್, ಜ್ಞಾನದೀಪ್ ವಿ ಶೆಟ್ಟಿ 304ನೇ ರ್‍ಯಾಂಕ್, ಅನಿಕೇತ್ ರವಿರಾಜ್ ಉಡುಪ 313ನೇ ರ್‍ಯಾಂಕ್, ಭರತ್ ರೆಡ್ಡಿ 321ನೇ ರ್‍ಯಾಂಕ್, ಸಿದ್ಧಾಂತ್ ನಾಯ್ಕಬಾ ಜಿ 322ನೇ ರ್‍ಯಾಂಕ್, ಚಿನ್ಮಯಿ ಭಟ್ 353ನೇ ರ್‍ಯಾಂಕ್, ಸೌಖ್ಯತಾ ಸಿ ಎಂ 371ನೇ ರ್‍ಯಾಂಕ್, ಎಸ್ ಅಮೇಯ ಉತ್ಪಾಲ್ 391ನೇ ರ್‍ಯಾಂಕ್, ವರುಣ್ ಜೆ 405ನೇ ರ್‍ಯಾಂಕ್, ಈಶಾಂತ್ ಪಾಟೀಲ್ ಜಿ 428ನೇ ರ್‍ಯಾಂಕ್, ಪ್ರಣವ್ ಎಂ ಯು 487ನೇ ರ್‍ಯಾಂಕ್‌ಗಳಿಸಿರುತ್ತಾರೆ.

ಕೆ.ಸಿ.ಇ.ಟಿ-2026ರ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾಗಿ ನಿಂತ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಹಾಗೂ ಜ್ಞಾನಸುಧಾ ಪರಿವಾರ ಅಭಿನಂದಿಸಿದೆ.

Related posts

ಮಹಾಭಾರತದ ನೂರಾರು ಕಥೆಗಳು – ಉಪನ್ಯಾಸ ಮಾಲಿಕೆ

Madhyama Bimba

ಕಾರ್ಕಳ ಬಿಜೆಪಿ ಕಛೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

Madhyama Bimba

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಮಾ. 15ರಂದು ಬೃಹತ್ ರಕ್ತದಾನ ಶಿಬಿರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More