ಮೂಡುಬಿದಿರೆ

ರೋಟರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

ಮೂಡಬಿದ್ರೆ : ರೋಟರಿ ಪಿ.ಯು.ಕಾಲೇಜು ಮೂಡಬಿದಿರೆ ಇಲ್ಲಿನ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಖ್ಯಾತ ವಾಗ್ಮಿ, ಬರಹಗಾರರಾದ ಅರವಿಂದ ಚೊಕ್ಕಾಡಿ ಇವರು ದೀಪವನ್ನು ಬೆಳಗಿಸಿ ಉದ್ಘಾಟಸಿ ಮಾತನಾಡಿ ಕಾಲೇಜಿನ ಮಕ್ಕಳಿಗೆ ಇರಬೇಕಾದ ನಾಯಕತ್ವದ ಗುಣ ಮತ್ತು ಶಿಸ್ತು, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಆಳವಡಿಸುವ ಮೌಲ್ಯಗಳ ಬಗ್ಗೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕುಗಳ ಮಹತ್ವವನ್ನು ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ರೋ.ಡಾ|| ಬಿ.ಎ ಯತಿಕುಮಾರ ಸ್ವಾಮಿ ಗೌಡ ಇವರು ಉತ್ತಮ ನಾಯಕ ಯಾರು ಮತ್ತು ನಾಯಕತ್ವ ವಹಿಸುವಲ್ಲಿ ಅವನ ಪಾತ್ರವನ್ನು ಜ್ಞಾನದ ಅರಿವನ್ನು ಬೆಳೆಸುವುದರ ಜೊತೆಗೆ ಒಬ್ಬ ವಿದ್ಯಾರ್ಥಿಯಾದವನು ಕಲಿಸಿದ ಗುರುಗಳಿಗೆ, ಹೆತ್ತ ತಂದೆ ತಾಯಿಗೆ ಮತ್ತು ಕಲಿತ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತರಬೇಕು ಎಂದು ಹೇಳಿ ಕಾಲೇಜು ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ರವಿ ಕುಮಾರ್ ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ. ವೈಶಾಲಿ ಸ್ವಾಗತಿಸಿದರು. ಆಂಗ್ಲ ಭಾಷೆ ಉಪನ್ಯಾಸಕ ಆನ್ಶಿಲ್ ಸೆರಾವೋ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷೆ ಉಪನ್ಯಾಸಕ ಗೌರಿಶಂಕರ್ ಇವರು ವಂದಿಸಿದರು.

Related posts

ಆಕಸ್ಮಿಕ ಬಾವಿಗೆ ಬಿದ್ದ ವೃದ್ಧೆ ಸಾವು

Madhyama Bimba

ಮೂಡುಬಿದಿರೆಯಲ್ಲಿ ಉಚಿತ ಸೀರೆ ಕುಚ್ಚು ಕೌಶಲ್ಯ ತರಬೇತಿ ಉದ್ಘಾಟನೆ

Madhyama Bimba

ಮೂಡುಬಿದಿರೆ ಪುರಸಭೆಗೆ ಹೈ ಕೋರ್ಟ್ ನಿರ್ದೇಶನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More