ಮೂಡುಬಿದಿರೆ

ಆಕಸ್ಮಿಕ ಬಾವಿಗೆ ಬಿದ್ದ ವೃದ್ಧೆ ಸಾವು

ಮೂಡುಬಿದಿರೆ : ವೃದ್ಧೆಯೋವ೯ರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ಒಂಟಿಕಟ್ಟೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಮಾಪಾ೯ಡಿ ಗ್ರಾಮದ ಒಂಟಿಕಟ್ಟೆಯ ದೇವಿ ಪ್ರಸಾದ್ ನಿಲಯದ ದಿ. ತನಿಯ ಪೂಜಾರಿ ಅವರ ಪತ್ನಿ ಕಮಲ (99) ಮೃತಪಟ್ಟ ವೃದ್ಧೆ.
ಉತ್ತಮ ಆರೋಗ್ಯವನ್ನು ಹೊಂದಿದ್ದ ಕಮಲ ಅವರು ಪ್ರತಿದಿನ ಬಾವಿಗೆ ಇಣುಕಿ ನೋಡುವ ಅಭ್ಯಾಸವನ್ನು ಹೊಂದಿದ್ದರು. ಇಂದೂ ಕೂಡ ಎಂದಿನಂತೆ ಬಾವಿಗೆ ಇಣುಕಿ ನೋಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಗಂಭೀರ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಮೂಡುಬಿದಿರೆಯ ಅಗ್ನಿಶಾಮಕ ದಳದ ಸಿಬಂಧಿಗಳು ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತರಿಗೆ ಇಬ್ಬರು ಪುತ್ರರು ಮತ್ತು ಓವ೯ ಪುತ್ರಿ ಇದ್ದಾರೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

  ಲಾಡಿ ಶ್ರೀ ನಾಗಬ್ರಹ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿ

Madhyama Bimba

ಎಕ್ಸಲೆಂಟ್ ಸ್ಕೂಲ್(ಸಿಬಿಎಸ್ಇ) ವಾರ್ಷಿಕೋತ್ಸವ

Madhyama Bimba

ಮಹಾವೀರ ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಓರಿಯಂಟೇಶನ್ ಡೇ’ ಕಾರ್ಯಾಗಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More