ಮೂಡುಬಿದಿರೆ

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸತ್ತಿನ ಉದ್ಘಾಟನೆ ಮತ್ತು ಪದಗ್ರಹಣ

ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಮೂಡಬಿದರೆಯ ಹಿರಿಯ ನ್ಯಾಯವಾದಿ, ರೋಟರಿ ವಿದ್ಯಾ ಸಂಸ್ಥೆಯ ಕಾನೂನು ಸಲಹೆಗಾರ ಕೆ ಆರ್ ಪಂಡಿತ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಓದುವ ಮತ್ತು ತಿಳಿಯುವ ಹಂಬಲ ಇರಬೇಕು. ಶಿಸ್ತು ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿ ಶಾಲೆಯಲ್ಲಿ ಸಂಸತ್ತಿನ ಅವಶ್ಯಕತೆ ನಿರ್ವಹಣೆ ಮತ್ತು ಅದರ ಲಾಭಗಳನ್ನು ಮಕ್ಕಳಿಗೆ ತಿಳಿಸಿದರು.


ಸಂಚಾಲಕ ಪ್ರವೀಣ್ ಚಂದ್ರ ಜೈನ್ ಇವರು ನೂತನವಾಗಿ ಆಯ್ಕೆಗೊಂಡ ಸಂಸತ್ ಸದಸ್ಯರನ್ನು ಅಭಿನಂದಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್ ಇವರು ಪ್ರಸ್ತಾವಿಕವಾಗಿ ಮಾತನಾಡಿ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು.

ಅನಂತ ಕೃಷ್ಣರಾವ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇವರು ಭಾರತವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಅದರ ಮಾದರಿಯಲ್ಲಿ ಶಾಲೆಯಲ್ಲಿಯೂ ಸಂಸತ್ತಿನ ಚಟುವಟಿಕೆಗಳನ್ನು ನಡೆಸುವ ಪ್ರಶಂಸನೀಯ ಎನ್ನುತ್ತಾ ಶಾಲಾ ಸಂಸತ್ ಸದಸ್ಯರಾಗಿ ಆಯ್ಕೆಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರೌಢಶಾಲಾ ನಾಯಕರಾಗಿ ಆಯ್ಕೆಯಾದ ಜೆನಿಲಿಯಾ ಹಾಗೂ ಪ್ರಾಥಮಿಕ ಶಾಲಾ ನಾಯಕರಾಗಿ ಆಯ್ಕೆಯಾದ ಪ್ರತ್ಯೂಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯ ಸಂಯೋಜಕ ಗಜಾನನ ಮರಾಠೆ, ಆಡಳಿತಾಧಿಕಾರಿ ಪ್ರಫುಲ್ ಡಿಸೋಜ, ಎಲ್ಲಾ ವರ್ಗ ಸಂಯೋಜಕರು, ಶಾಲಾ ಸಂಸತ್ತಿನ ಮೇಲ್ವಿಚಾರಕ ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸಂಜನಾ ವಿ. ಸ್ವಾಗತಿಸಿದರು. ರಿಶೋನಾ ಧನ್ಯವಾದ ಸಮರ್ಪಣೆಗೈದರು. ರಂಜನಾ ಮತ್ತು ನಂದನಾ ಕಾರ್ಯಕ್ರಮ ನಿರೂಪಿಸಿದರು.

Related posts

ನೀಟ್-2026ರಲ್ಲಿ ಎಕ್ಸಲೆಂಟ್ ಮೂಡುಬಿದಿರೆ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Madhyama Bimba

ಕಟ್ಟಡ ಕಾರ್ಮಿಕರ ಪಿಂಚಣಿ ಬಿಡುಗಡೆಗೆ ಆಗ್ರಹ: ವಸಂತ ಆಚಾರಿ

Madhyama Bimba

ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ವೇದಿಕೆ: ಮುನಿರಾಜ ರೆಂಜಾಳ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More