ಮೂಡುಬಿದಿರೆ

ಶ್ರೀ ಮಹಾವೀರ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮದ ಅಂಗವಾಗಿ ಯುನೈಟೆಡ್ ಪಬ್ಲಿಷರ್ಸ್‌ನ ಮಾಲಕ ಹಾಗೂ ಇ-ಲರ್ನ್ ಲೈಬ್ರರಿಯ ಅನ್ವೇಷಕರಾದ ಧೀರಜ್‌ ಇವರು ‘ಡಿಜಿಟಲ್ ಲೈಬ್ರರಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾಲೇಜಿನ ವಿದ್ಯಾರ್ಥಿಗಳು ಪುಸ್ತಕದ ಅಂಗಡಿಗಳಿಂದ ಪಠ್ಯಪುಸ್ತಕಗಳನ್ನು ಕೊಳ್ಳಲು ಸಾಧ್ಯಾವಾಗದಿರುವುದು, ಕಾಲೇಜಿನಗ್ರಂಥಾಲಯದಲ್ಲಿ ಸೀಮಿತ ಸಂಖ್ಯೆಯ ಪುಸ್ತಕಗಳು ಇರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಪುಸ್ತಕದ ಅಭಾವ ಎದುರಿಸುವುದನ್ನು ತಪ್ಪಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ತಾವು ಡಿಜಿಟಲ್ ಲೈಬ್ರರಿ ಆರಂಭಿಸಿರುವುದಾಗಿ ಹೇಳಿದ ಅವರು ಎಸ್‌ಇಪಿ ಮತ್ತು ಎನ್‌ಇಪಿ ಪಠ್ಯಕ್ರಮಗಳು, ಅವುಗಳ ಅನುಸಾರ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳು, ವಿಷಯ ಸಂಬಂಧಿ ಹೆಚ್ಚುವರಿ ಪಠ್ಯಪುಸ್ತಕಗಳು, ಪರಾಮರ್ಶನ ಗ್ರಂಥಗಳು, ಸೆಮಿಸ್ಟರ್ ಮುಖ್ಯ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಹಾಗೂ ಉನ್ನತ ವ್ಯಾಸಂಗ ಮತ್ತು ವೃತ್ತಿ ಸಂಬಂಧಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪರಾಮರ್ಶನ ಗ್ರಂಥಗಳು ಮತ್ತು ಪೂರ್ವತಯಾರಿ ಕಿರುಪರೀಕ್ಷೆಗಳು, ಕೌಶಲ್ಯಾಧಾರಿತ ಕೋರ್ಸ್‌ಗಳ ಕಲಿಕೆಗೆ ಅಗತ್ಯವಿರುವ ಅಧ್ಯಯನ ಸಾಮಗ್ರಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಇತರ ಆನ್‌ಲೈನ್ ಗ್ರಂಥಾಲಯಗಳು ಇತ್ಯಾದಿಗಳನ್ನು ವಿದ್ಯಾರ್ಥಿಗಳು ತಾವು ಇರುವ ಸ್ಥಳದಿಂದಲೇ ಒದುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಪಾಲ್ಗೊಳ್ಳಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಣಕ ವಿಜ್ಞಾನ ವಿಭಾಗದ ಕು.ದೀಕ್ಷಾ ಕಾರ್ಯಕ್ರಮ ಸಂಯೋಜಿಸಿದರು. ಡಾ. ಚಂದನಾ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ, ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಭಾಗವಹಿಸಿದರು.

 

Related posts

ಬಿಲ್ಲವರು, ಬಂಟರು, ಹಾಗೂ ಮೊಗವೀರರು ಒಂದೇ ತಾಯಿಯ ಮಕ್ಕಳು – ಗುರುನಾರಾಯಣ ಸಂಘದ ಅಮೃತ ಮಹೋತ್ಸವದಲ್ಲಿ ಡಾ. ಮೋಹನ್ ಆಳ್ವ

Madhyama Bimba

ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಹೃದಯ ರೋಗಿಗಳಿಗೆ ಉಚಿತ ಅಂಜಿಯೋಪ್ಲಾಸ್ಟಿ ಚಿಕಿತ್ಸೆ

Madhyama Bimba

ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಆತ್ಮವಿಶ್ವಾಸ ವೃದ್ಧಿ ಕಾರ್ಯಾಗಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More