ಕಾರ್ಕಳ

ಕಾರ್ಕಳ ತಾಲೂಕು ಗುಡಿಗಾರ ಸಮಾಜ ಸಂಘ ಕೆರ್ವಾಶೆ ವತಿಯಿಂದ ಗಿಡ ನೆಡುವ ಹಾಗೂ ಸ್ವಚ್ಛತಾ  ಕಾರ್ಯಕ್ರಮ

ಕಾರ್ಕಳ ತಾಲೂಕು ಗುಡಿಗಾರ ಸಮಾಜ ಸುಧಾರಕ ಸಂಘ, ಕೆರ್ವಾಶೆ ಇವರ ವತಿಯಿಂದ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಕೆರ್ವಾಶೆ ಇಲ್ಲಿ ಜು. 12ರಂದು ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ 15 ಕಾಳು ಮೆಣಸಿನ ಗಿಡಗಳನ್ನು ನೆಡಲಾಯಿತು. ಜೊತೆಗೆ ಶಾಲಾ ಆವರಣದಲ್ಲಿದ್ದ ಅರಣ್ಯ ಇಲಾಖೆಯವರಿಂದ ತೆರವುಗೊಳಿಸಲ್ಪಟ್ಟ ಮಾವಿನ ಮರದ ರೆಂಬೆಗಳನ್ನು ಸ್ಥಳಾಂತರಿಸುವ ಕಾರ್ಯವನ್ನೂ ಸಂಘದ ವತಿಯಿಂದ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಗಣೇಶ್ ಗುಡಿಗಾರ್, ಉಪಾಧ್ಯಕ್ಷೆ ಶ್ರೀಮತಿ ವಸಂತಿ ಗುಡಿಗಾರ್, ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಗುಡಿಗಾರ್, ಗೌರವ ಸಲಹೆಗಾರರಾದ ವಾಸುದೇವ ಗುಡಿಗಾರ್ ಹಾಗೂ ಕೋಶಾಧಿಕಾರಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾರಾಯಣ ಗುಡಿಗಾರ್, ಎಸ್‌ಡಿಎಮ್‌ಸಿ ಉಪಾಧ್ಯಕ್ಷರಾದ ಶ್ರೀಮತಿ ರೂಪ ಶೆಟ್ಟಿ ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಸ್ವಾಗತಿಸಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿ, ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

Related posts

ಪಳ್ಳಿ ಪದವಿ ಪೂರ್ವ ಕಾಲೇಜು: ಶಾಲಾ ಪ್ರಾರಂಭೋತ್ಸವ ಮತ್ತು ಪುಸ್ತಕ, ಸಮವಸ್ತ್ರ ವಿತರಣೆ

Madhyama Bimba

ಸರ್ಕಾರದ ಜನವಿರೋಧಿ ಧೋರಣೆಗಳನ್ನು ಜನಸಾಮಾನ್ಯರು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? – ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ

Madhyama Bimba

114 ವರ್ಷಗಳ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕಿನಿಂದ 1,535 ಕೋಟಿ ರೂಪಾಯಿ ವ್ಯವಹಾರ ; 22 ನೇ ಶಾಖೆ ದೇರಳಕಟ್ಟೆ ಮತ್ತು 23ನೇ ಶಾಖೆ ಕಟಪಾಡಿಯಲ್ಲಿ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More