ಕಾರ್ಕಳ: ವಿದ್ಯಾಭಾರತಿ ಸಂಯೋಜಿತ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುಲ್ಕೇರಿ ಕಾರ್ಕಳ ಇದರ ಅಮೃತ ಮಹೋತ್ಸವ ಸಂಭ್ರಮ ಮತ್ತು ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವು ಏ. 05 ರಂದು ಶ್ರೀ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿದೆ.

ಬೆಳಿಗ್ಗೆ ಗಂಟೆ 7ಕ್ಕೆ ಗಣಹೋಮ ಹಾಗೂ ಪೂಜಾ ಕಾರ್ಯಕ್ರಮ, ಗಂಟೆ 9.30ಕ್ಕೆ ಧ್ಜಜಾರೋಹಣವನ್ನು ರಾಮಪ್ಪ ಎಜ್ಯುಕೇಶನ್ ಟ್ರಸ್ಟ್‌ನ ಸಂಚಾಲಕರಾದ ವೇದಾವತಿ ಆರ್. ಕಲ್ಯಾ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ರಾಮಪ್ಪ ಅನುದಾನಿತ ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಹರೀಶ್ ಕುಮಾರ್ ಶೆಟ್ಟಿ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಕಾರ್ಕಳ ಲೆಕ್ಕ ಪರಿಶೋಧಕರಾದ ಕೆ. ಕಮಲಾಕ್ಷ ಕಾಮತ್, ಕಾರ್ಕಳ ಸಿಆರ್‌ಪಿ ಶ್ರೀಮತಿ ಜ್ಯೋತಿ, ಕಾರ್ಕಳ ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷರಾದ ಪೃಥ್ವಿರಾಜ್ ಬಲ್ಲಾಳ್ ಉಪಸ್ಥಿತರಿರುವರು. ಸಂಜೆ ಗಂಟೆ 6ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ಜರಗಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಶ್ರೀ ರಾಮಪ್ಪ ಎಜ್ಯುಕೇಶನ್ ಟ್ರಸ್ಟ್‌ನ ಶರತ್ ಡಿ. ಕಲ್ಯಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಎಂಆರ್‌ಪಿಎಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ಯಾಮ ಕಾಮತ್, ವಿದ್ಯಾಭಾರತಿ ನಿಕಟಪೂರ್ವ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಯಾದ ಜಿ. ಆರ್. ಜಗದೀಶ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗಿರಿಜಮ್ಮ ಎಸ್.ಆರ್, ಬೋಳಾಸ್ ಆಗ್ರೋ. ಪ್ರೈ.ಲಿ.ನ ಬೋಳ ದಾಮೋದರ ಕಾಮತ್, ಬೆಂಗಳೂರು ಉದ್ಯಮಿಗಳಾದ ಗುರುದತ್ ಶ್ಯಾನುಭಾಗ್, ನಿವೃತ್ತ ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಮಂಗಳೂರು ಪಣಂಬೂರು, ಮಾರುಕಟ್ಟೆ ಅಭಿವೃದ್ಧಿ ಪರದೀಪ್ ಫಾಸ್ಫೇಟ್ (ಲಿ.) ನ ಜಂಟಿ ಜನರಲ್ ಮ್ಯಾನೇಜರ್ ಕೆ.ಬಿ. ಕೀರ್ತನ್ ಕುಮಾರ್, ಕಾರ್ಕಳ ಉದ್ಯಮಿಗಳಾದ ಸುಜಯ ಕುಮಾರ್ ಶೆಟ್ಟಿ ಭಾಗವಹಿಲಿರುವರು. ರಾತ್ರಿ ಗಂಟೆ 11 ರಿಂದ ನಮ್ಮ ಕಲಾವಿದರು ಬೆದ್ರ ಇವರಿಂದ ತುಳು ಹಾಸ್ಯಮಯ ನಾಟಕ ವೈರಲ್ ವೈಶಾಲಿ ಜರಗಲಿರುವುದು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
