ಕಾರ್ಕಳಹೆಬ್ರಿ

ಕಾರ್ಕಳ: ಕತ್ತಿಯಿಂದ ಹಲ್ಲೆ

ಕಾರ್ಕಳ: ಮಿಯ್ಯಾರಿನಅನಿಲ್ ಮಸ್ಕರೇನ್ಹಸ್ (53,) ಮೇಲೆ ಮಾಳದ ಗಣೇಶ್ ಎಂಬಾತ ಕತ್ತಿಯಿಂದ ಹಲ್ಲೆ ಮಾಡಿದ ಘಟನೆ ಜು. 15ರಂದು ವರದಿಯಾಗಿದೆ.

ಅನಿಲ್ ಮಸ್ಕರೇನ್ಹಸ್ ಮಾಳ ಗ್ರಾಮದ ಹುಕ್ರಟ್ಟೆ ಎಂಬಲ್ಲಿ ಜಾಗ ಮತ್ತು ಮನೆ ಹೊಂದಿದ್ದು, ಅಲ್ಲಿಗೆ ಹೋಗಿ ಬರುತ್ತಾ ಇರುತ್ತಾರೆ. ಅವರು ಅಲ್ಲಿಗೆ ಹೋದ ಸಮಯದಲ್ಲಿ ಅಲ್ಲಿ ನೆರೆಮನೆಯ ನಿವಾಸಿಯಾದ ಗಣೇಶ ಎಂಬಾತನು ಇದು ತನ್ನ ಜಾಗ ಎಂದು ಜಗಳ ಮಾಡುತ್ತಿದ್ದನು. ದಿನಾಂಕ 15.07.2026 ರಂದು ಅವರು ಬೆಳಿಗ್ಗೆ ಜಾಗಕ್ಕೆ ಹೋಗಿ ಕೆಲಸ ಮಾಡಿ ಸಂಜೆ 5.30 ಗಂಟೆಗೆ ಮನೆಯ ಕಂಪೌಂಡ್ ಹತ್ತಿರ ಒಳಗೆ ಹುಲ್ಲು ಮತ್ತು ಕಳೆಗಿಡಗಳನ್ನು ತೆಗೆಯುತ್ತಾ ಇದ್ದಾಗ ಗಣೇಶ ಈ ಜಾಗ ನನಗೆ ಸೇರಿದ್ದು ಇಲ್ಲಿ ಯಾಕೆ ಕೆಲಸ ಮಾಡುತ್ತೀಯಾ ಎಂದು ಆಕ್ಷೇಪಿಸಿದ್ದಾನೆ.

ಆಗ ಅನಿಲ್‌ರವರು ನಾನು ನನ್ನ ಜಾಗದಲ್ಲಿ ಕೆಲಸ ಮಾಡುತ್ತಾ ಇದ್ದೇನೆ ಎಂದು ಹೇಳಿ ಮನೆಯೊಳಗೆ ಹೋಗಿದ್ದು, ಇದರಿಂದ ಕೋಪಗೊಂಡ ಗಣೇಶ್ ಅವಾಚ್ಯ ಶಬ್ದಗಳಿಂದ ಬೈದು ತನ್ನ ಮನೆಗೆ ಹೋಗಿ ಮನೆಯಿಂದ ೨ ಕತ್ತಿಗಳನ್ನು ತೆಗೆದುಕೊಂಡು ಹೊರಗೆ ಬಾ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿ ಮನೆಯ ಸಿಟ್ ಔಟ್‌ಗೆ ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲಿಗೆ ತುಳಿದಿದ್ದಾನೆ.

ಮನೆಯ ಹೊರಗೆ ಇಟ್ಟಿದ್ದ ಅವರ   ಹೊಸ ಟಿವಿಎಸ್ ಜುಪಿಟರ್ ಸ್ಕೂಟರನ್ನು ಆಪಾದಿತನು ದೂಡಿ ಹಾಕಿದಾಗ ಸ್ಕೂಟರ್ ಹಾಳು ಮಾಡಬೇಡ ಎಂದು ಹೇಳಿ ಹೊರಗೆ ಬಂದಾಗ ಗಣೇಶ ಅನಿಲ್ ಮಸ್ಕರೇನ್ಹಸ್‌ಗೆ ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಕಡಿಯಲು ಬಂದಾಗ ಅವರು ತಡೆಯಲು ಕೈ ಅಡ್ಡ ಹಿಡಿದಿದ್ದು ಕತ್ತಿಯಿಂದ ಕಡಿದ ಪರಿಣಾಮ ಎಡಕೈಗೆ ತಾಗಿ ಹೆಬ್ಬೆರಳಿಗೆ ರಕ್ತಗಾಯವಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾರೆ.

ಈ ಬಗ್ಗೆ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಮಾತಿಬೆಟ್ಟು ಬಿಲ್ಲವ ಸಂಘದ ಯುವ ಘಟಕದ ವತಿಯಿಂದ ಆದಿತ್ಯ ಹರೀಶ್ ಪೂಜಾರಿಯವರಿಗೆ ಅಭಿನಂದನೆ

Madhyama Bimba

ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೋಮಾ ಪ್ರವೇಶಾತಿ : ಅರ್ಜಿ ಆಹ್ವಾನ

Madhyama Bimba

ಯುವವಾಹಿನಿ ಕ್ರೀಡೋತ್ಸವ: ಕಾರ್ಕಳ ಘಟಕಕ್ಕೆ ಹಲವು ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More