ಕಾರ್ಕಳಹೆಬ್ರಿ

ಚಿಕ್ಕಲ್‌ಬೆಟ್ಟು ಶಾಲೆಯಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆ ಉದ್ಘಾಟನೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಲ್ ಬೆಟ್ಟುವಿನ ಮಕ್ಕಳ ಹೆಚ್ಚಿನ ಕಲಿಕೆಗಾಗಿ ಕರ್ನಾಟಕ ಬ್ಯಾಂಕ್ ಮಂಗಳೂರು ವತಿಯಿಂದ ನೀಡಿದ ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆಯ ಉದ್ಘಾಟನಾ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿ ಸಹಾಯಕ ಮಹಾ ಪ್ರಭಂದಕರು ರಮೇಶ್ ವೈದ್ಯ ಉದ್ಘಾಟಿಸಿ ಡಿಡಿಯನ್ನು ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಅಶ್ವಿನಿ ಇವರಿಗೆ ಹಸ್ತಾಂತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಚಿಕ್ಕಲ್ ಬೆಟ್ಟು ಶಾಲಾ ಹಳೆ ವಿದ್ಯಾರ್ಥಿ ಹಾಗೂ ಮಂಗಳೂರು ಕರ್ನಾಟಕ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ನಾಗರಾಜ್ ರಾವ್ ಬಿ ಎರ್ಲಪಾಡಿ ಮಾತನಾಡಿ ವಿದ್ಯಾರ್ಥಿಗಳು ಕಲಿತು ಉನ್ನತ ಹುದ್ದೆಯನ್ನು ತಲುಪಿ ಸಮಾಜ ಸೇವೆ ಮಾಡಬೇಕು ಎಂದು ತಿಳಿಸಿದರು.


ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಸಂಜೀವ ಪೂಜಾರಿ, ಕರ್ನಾಟಕ ಬ್ಯಾಂಕ್ ಎರ್ಲಾಪಾಡಿ ಶಾಖೆಯ ಪ್ರಭಂದಕರು ಪಾಪಣ್ಣ, ಚಿಕ್ಕಲ್ ಬೆಟ್ಟು ಶಾಲಾ ನಿವೃತ್ತ ಅಧ್ಯಾಪಕರು ಜನಾರ್ಧನ ಹೆಗ್ಡೆ, ಹಿರ್ಗಾನ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರು ತಾರಾನಾಥ ಶೆಟ್ಟಿ ಮತ್ತು ದಿನೇಶ್ ಪೂಜಾರಿ, ಗ್ರಾಮಸ್ಥರಾದ ಜೀವಾನಂದ ಶೆಟ್ಟಿ ಮತ್ತು ರಮೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಉದಯ ಶೆಟ್ಟಿ ಬಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅಶ್ವಿನಿ ಧನ್ಯವಾದವಿತ್ತರು. ಶಿಕ್ಷಕಿಯರಾದ ಆಶಾ, ವಿಜಯ್ ಕುಮಾರ್ ಮತ್ತು ಸ್ನೇಹ ಸಹಕರಿಸಿದರು.

Related posts

ವರಂಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆ

Madhyama Bimba

ಕಾರ್ಕಳ ತಾಲೂಕು ಮಹಿಳಾ ಒಕ್ಕೂಟ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Madhyama Bimba

ಹೆಬ್ರಿ: ನೇಣು ಬಿಗಿದು ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More