ಮೂಡುಬಿದಿರೆ ಕೋಡಂಗಲ್ಲು ಎ ಜಿ ಸೋನ್ಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2024- 2026 ನೇ ಸಾಲಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಎಲೆಕ್ಟ್ರಿಷಿಯನ್ ವಿಭಾಗದ ಅನುಷ್ ಎಚ್ ಪೂಜಾರಿ, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗದ ಪ್ರಜ್ಞೇಶ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವಿಭಾಗದ ಶರಣ್ ರಾಜ್ ಶೆಟ್ಟಿ, ಮೆಕ್ಯಾನಿಕ್ ಡೀಸೆಲ್ ವಿಭಾಗದ ಅಫ್ರಾಸ್ ರವರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಉದ್ಯೋಗ ಕೌಶಲ್ಯ ದಲ್ಲಿ ಶೇಕಡ 100 ಅಂಕಗಳನ್ನು ಪಡೆದ ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವಿಭಾಗದ ಸುಕೇಶ್ ರನ್ನು ಗೌರವಿಸಲಾಯಿತು.
ಆ ನಂತರ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಮಹಾವೀರ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರವಣ್ ಉಪಾಧ್ಯಕ್ಷರಾಗಿ ಪೂಜಾರಿ ಅಶ್ವಿನ್ ಚಂದ್ರಶೇಖರ್ ,
ಕಾರ್ಯದರ್ಶಿಯಾಗಿ ಭವಿಷ್ , ಕ್ರೀಡಾ ಕಾರ್ಯದರ್ಶಿಯಾಗಿ ಕಾರ್ತಿಕ್ ಎಸ್ ಕುಂದರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಲೈನಿಷ್ ಡಿಸೋಜ ರವರು ಪ್ರಮಾಣವಚನ ಸ್ವೀಕರಿಸಿದರು.
ಅತಿಥಿಗಳಾಗಿ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ, ಮಹಾವೀರ ಕಾಲೇಜು ಪ್ರಾಂಶುಪಾಲರಾದ ಮೇಜರ್ ಡಾಕ್ಟರ್ ರಾಧಾಕೃಷ್ಣ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಕಾಂತ್ ಹೊಳ್ಳ ರವರು ಸ್ವಾಗತಿಸಿದರು.
ಶಿವಪ್ರಸಾದ್ ಹೆಗ್ಡೆ ಯವರು ನಿರ್ವಹಿಸಿದರು. ರಾಮಚಂದ್ರ ಆಚಾರ್ಯ ಧನ್ಯವಾದವಿತ್ತರು.
