ಮೂಡುಬಿದಿರೆ

ಮೂಡುಬಿದಿರೆ ಆಸ್ಪತ್ರೆಯ ಜಗಣ್ಣ ವಿಧಿವಶ

ಮೂಡುಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜಗದೀಶ್ ಅವರು ಇಂದು ನಿಧನರಾಗಿದ್ದಾರೆ.

ಅವರು ಮೂಡುಬಿದಿರೆ ಮಾತ್ರವಲ್ಲದೆ ತಾಲೂಕಿನ ಬೇರೆ ಬೇರೆ ಆಸ್ಪತ್ರೆಯಲ್ಲಿಯೂ ಶವಗಳ ಪೋಸ್ಟ್ ಮಾರ್ಟಮ್ ಮಾಡುವುದರಲ್ಲಿ ಪ್ರಸಿದ್ಧಿ ಪಡೆದಿದ್ದರು. ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳಲ್ಲಿ ಮಾತ್ರವಲ್ಲದೆ ಊರವರಿಗೂ ‘ ಪೋಸ್ಟ್ ಮಾರ್ಟಮ್ ಜಗ್ಗಣ್ಣ’ ಎಂದೇ ಕರೆಯಲ್ಪಡುತ್ತಿದ್ದರು.

ಕಾಸರಗೋಡು ಮೂಲದವರಾಗಿರುವ ಅವರ ಸೇವಾ ಮನೋಭಾವವನ್ನು ಗುರುತಿಸಿ ಹಲವು ಸಂಘಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದವು.
ಅಸೌಖ್ಯದಲ್ಲಿದ್ದ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದು ಪತ್ನಿ ಭೋಜಮ್ಮ,ಪುತ್ರಿ ಮಧುರಾ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Related posts

 ನಾಗರಾಜ್ ಭಟ್ ಇನ್ನಿಲ್ಲ

Madhyama Bimba

ಬ್ರಹ್ಮಶ್ರೀ ನಾರಾಯಣಗುರುವರ್ಯರ 172ನೇ ಜನ್ಮ ದಿನಾಚರಣೆ ಹಾಗೂ ಲಕ್ಷ ಕುಂಕುಮಾರ್ಚನೆಗೆ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಸೆ. 26ರಂದು ಶ್ರೀ ಮಹಾವೀರ ಕಾಲೇಜಿನಲ್ಲಿ ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯ ಭಾರತ ಮತ್ತು ಉದ್ಯಮಶೀಲತೆ” ಕುರಿತು ರಾಷ್ಟ್ರೀಯ ಬಹುಶಿಸ್ತೀಯ ಸಮ್ಮೇಳನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More