ಆಳ್ವಾಸ್ ನಿರಾಮಯ ಆಸ್ಪತ್ರೆ (ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ವಿದ್ಯಾಗಿರಿ, ಮೂಡುಬಿದಿರೆ ಇದರ ಅಂಗ ಸಂಸ್ಥೆ), ಕಾಯಚಿಕಿತ್ಸಾ, ಪಂಚಕರ್ಮ, ಪ್ರಸೂತಿ ತಂತ್ರ ಹಾಗೂ ಶಾಲಕ್ಯ ತಂತ್ರ ವಿಭಾಗ ಮತ್ತು ಬಂಟರ ಸಂಘ ಮಹಿಳಾ ಘಟಕ (ರಿ.) ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನದ ಪ್ರಯುಕ್ತ ಉಚಿತ ಆಯುರ್ವೇದ ತಪಾಸಣಾ ಶಿಬಿರ ಸೆ.19ರಂದು ಆಳ್ವಾಸ್ ನಿರಾಮಯ ಆಸ್ಪತ್ರೆ ವಿದ್ಯಾಗಿರಿ, ಮೂಡುಬಿದಿರೆ ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಸಂಘ ಮಹಿಳಾ ಘಟಕ (ರಿ.) ಮೂಡುಬಿದಿರೆ ಇದರ ಅಧ್ಯಕ್ಷರಾದ ಶ್ರೀಮತಿ ಶೋಭಾ ಹೆಗ್ಡೆ ಯವರು ನೆರವೇರಿಸಿದರು.
ಈ ವೈದ್ಯಕೀಯ ಶಿಬಿರದಲ್ಲಿ ಜನರಲ್ ಮೆಡಿಸಿನ್, ನರ, ಮೂಳೆ ಸಂಬಂಧಿ ಕಾಯಿಲೆಗಳು, ಸ್ತ್ರೀರೋಗ ಸಮಸ್ಯೆಗಳು, ಕಣ್ಣು, ಕಿವಿ, ಮೂಗು, ಗಂಟಲು ಸಂಬಂಧಿ ಸಮಸ್ಯೆಗಳ ತಪಾಸಣೆ ಹಾಗೂ ರೋಗದ ಬಗ್ಗೆ ಮಾಹಿತಿ ಸಂಪೂರ್ಣ ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸುರೇಖಾ ಪೈ ವಹಿಸಿದ್ದರು.
ಮುಖ್ಯ ಅಥಿತಿಯಾಗಿ ಬಂಟರ ಸಂಘ ಮಹಿಳಾ ಘಟಕ (ರಿ.) ಮೂಡುಬಿದಿರೆ ಇದರ ಕಾರ್ಯದರ್ಶಿ ಸಂಗೀತಾ ಶೆಟ್ಟಿ ಆಗಮಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಶ್ರುತಿ ಆರ್. ನೆರವೇರಿಸಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಬೋಧಕ ಸಿಬ್ಬಂಧಿಗಳು, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು, ಕಿರಿಯ ವೈದ್ಯರುಗಳು ಹಾಗೂ 50 ಕ್ಕೂ ಅಧಿಕ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
