ಕಾರ್ಕಳ

ಬಸ್ರಿ ಶಾಲೆ ಬೈಲೂರು: 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.


ನಿವೃತ್ತ ಯೋಧರಾದ ರಾಜೇಶ್ ದೇವಾಡಿಗ, ಬೈಲೂರು ಧ್ವಜಾರೋಹಣವನ್ನು ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಯಾರದ್ದೋ ಉಡುಗೊರೆ ಅಲ್ಲ ಅದು ತ್ಯಾಗ ಬಲಿದಾನಗಳ ಮೂಲಕ ಪಡೆದುಕೊಂಡಿದ್ದು. ಇದಕ್ಕಾಗಿ ಹೋರಾಡಿದ ಮಹನೀಯರನ್ನ ನಾವು ಸ್ಮರಿಸಲೇಬೇಕು. ಅವರನ್ನು ಗೌರವಿಸಲೇಬೇಕು ಎಂದರು.


ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವಸಂತ ಕುಲಾಲ್ ವಹಿಸಿದ್ದರು.


ಈ ಸಂದರ್ಭದಲ್ಲಿ ಉದ್ಯಮಿ ಜಾರ್ಕಳ ರಾಜೇಶ್ ಶೆಟ್ಟಿಯವರು ಮಕ್ಕಳಿಗೆ ಕೊಡಮಾಡಿದ ಐಡಿ ಕಾರ್ಡ್‌ನ್ನು ವಿತರಿಸಲಾಯಿತು.


ವೇದಿಕೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿಶಿರ್ ಶೆಟ್ಟಿ, ಗೌರವಾಧ್ಯಕ್ಷರಾದ ಸದಾನಂದ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಹರೀಶ ಆಚಾರ್ಯ, ಸಂಯೋಜಕರಾದ ಆನಂದ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯರಾದ ವಸಂತಿ ಎಚ್. ಜಿ., ಎಸ್.ಡಿ.ಎಂಸಿ ಉಪಾಧ್ಯಕ್ಷೆ ಶ್ರೀಮತಿ ರೂಪ ಆಚಾರ್ಯ ಉಪಸ್ಥಿತರಿದ್ದರು.


ಬಸ್ರಿ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್. ಸಿ ಹಾಗೂ ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಹತ್ತು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ನಿವೃತ್ತ ಯೋಧ ರಾಜೇಶ್ ದೇವಾಡಿಗ ಹಾಗೂ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಗೆ ವಿಶೇಷ ದೇಣಿಗೆಯಿತ್ತು ಸಹಕರಿಸಿದ ಹಸೈನರ್ ಬೈಲೂರು ಇವರನ್ನು ಸನ್ಮಾನಿಸಲಾಯಿತು.

ಸಹ ಶಿಕ್ಷಕ ದಿನೇಶ್ ಶೆಟ್ಟಿ ನಿರೂಪಿಸಿ ಮುಖ್ಯ ಶಿಕ್ಷಕಿ ವಸಂತಿ ಹೆಚ್. ಜಿ. ಸ್ವಾಗತಿಸಿ ಸಹ ಶಿಕ್ಷಕಿ ಶ್ರೀಮತಿ ಕಾವೇರಿ ವಂದಿಸಿದರು.

Related posts

ಬೈಲೂರು ನಚಿಕೇತ ವಿದ್ಯಾಲಯದಲ್ಲಿ ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ ಸ್ಪರ್ಧೆ

Madhyama Bimba

ಕಾರ್ಕಳ ತಾಲೂಕು ಮಹಿಳಾ ಒಕ್ಕೂಟ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Madhyama Bimba

ಕೆರ್ವಾಶೆಯಲ್ಲಿ ಆ. 09ರಂದು ಆಟಿಡೊಂಜಿ ಕೆಸರ್ದ ಕೂಟ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More