ಕಾರ್ಕಳ

ಕೆರ್ವಾಶೆಯಲ್ಲಿ ಆ. 09ರಂದು ಆಟಿಡೊಂಜಿ ಕೆಸರ್ದ ಕೂಟ

ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬಿಲ್ಲವ ಗ್ರಾಮ ಸಮಿತಿ ಕೆರ್ವಾಶೆ ಇವರ ನೇತೃತ್ವದಲ್ಲಿ
ಆಟಿಡೊಂಜಿ ಕೆಸರ್ದ ಕೂಟ ಆ. 09 ಆದಿತ್ಯವಾರದಂದು  ಕೆರ್ವಾಶೆ ಬಂಗ್ಲೆಗುಡ್ಡೆ ಹುರಿಕುಮೇರು ದಯಾನಂದ ಸಾಲ್ಯಾನ್‌ರವರ ಗದ್ದೆಯಲ್ಲಿ ಜರಗಲಿದೆ.

ಕಾರ್ಯಕ್ರಮವನ್ನು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆರ್ವಾಶೆ ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ಮಖ್ಯ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಮುದ್ರಾಡಿ, ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವ ಅಧ್ಯಕ್ಷರಾದ ಅನಿಲ್ ಎಸ್ ಪೂಜಾರಿ, ಮಹಿಳಾ ಅಧ್ಯಕ್ಷರಾದ ಶ್ರೀಮತಿ ರಕ್ಷಿತಾ ಎಸ್ ಮಾಳ, ಮಿಯಾರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ತಾರನಾಥ್ ಕೋಟ್ಯಾನ್, ಕಾರ್ಕಳ ತಾಲೂಕು ಪಂಚಾಯತ್ ಕೆ.ಡಿ.ಪಿ. ಸದಸ್ಯರಾದ ಸಂತೋಷ ಪೂಜಾರಿ, ಯುವವಾಹಿನಿ ಕಾರ್ಕಳ ಘಟಕ ಕಾರ್ಯದರ್ಶಿ ರಾಕೇಶ್ ಅಮೀನ್, ಮುಡಾರು ಗ್ರಾಮ ಸಮಿತಿ ಅಧ್ಯಕ್ಷ ಸುನಿಲ್ ಪೂಜಾರಿ ಬುನ್ನಾಡಿ, ಮಹಿಳಾ ಅಧ್ಯಕ್ಷೆ ಶ್ರೀಮತಿ ಸುಜಾತಾ ಸಾಲಿಯಾನ್, ನಲ್ಲೂರು ಗ್ರಾಮ ಸಮಿತಿ ಅಧ್ಯಕ್ಷ ಶಂಕರ್ ಪೂಜಾರಿ, ಮಹಿಳಾ ಅಧ್ಯಕ್ಷೆ ಶ್ರೀಮತಿ ವನಿತಾ ಪೂಜಾರಿ, ರೆಂಜಾಳ ಗ್ರಾಮ ಸಮಿತಿ ಅಧ್ಯಕ್ಷ ನವೀನ್ ಸಾಲಿಯಾನ್, ಮಹಿಳಾ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಪೂಜಾರಿ, ಮಿಯ್ಯಾರು ಗ್ರಾಮ ಸಮಿತಿ ಅಧ್ಯಕ್ಷೆ ಪ್ರಶಾಂತ್ ಪೂಜಾರಿ ಮಿಯ್ಯಾರು, ಮಹಿಳಾ ಅಧ್ಯಕ್ಷೆ ಶ್ರೀಮತಿ ಕುಶಾಲ ಪೂಜಾರಿ, ಮಾಳ ಗ್ರಾಮ ಸಮಿತಿ ಮಹಿಳಾ ಅಧ್ಯಕ್ಷೆ ಶ್ರೀಮತಿ ವಿಮಲಾ ಪೂಜಾರಿ ಭಾಗವಹಿಸಲಿದ್ದಾರೆ.

ಪುರುಷರಿಗಾಗಿ ಹಗ್ಗಜಗ್ಗಾಟ, ವಾಲಿಬಾಲ್, 3 ಕಾಲಿನ ಓಟ, ಗೂಟ ಸುತ್ತುವುದು, ಕೋಣ ಓಟ್, ಮಹಿಳೆಯರಿಗಾಗಿ ಹಗ್ಗಜಗ್ಗಾಟ, ತ್ರೋಬಾಲ್, 100ಮೀ. ಓಟ, ಗೂಟ ಸುತ್ತುವುದು, ರಿಲೇ, ಮಕ್ಕಳಿಗಾಗಿ ಹಾಳೆ ಎಳೆಯುವುದು, ಲಿಂಬೆ ಚಮಚ, ಬಲೂನ್ ಆಟ ಹಾಗೂ ಸಾರ್ವಜನಿಕರಿಗೆ ನಿಧಿ ಶೋಧ ಸ್ಪರ್ಧೆಗಳು ಜರಗಲಿದೆ.

 

Related posts

ಇನ್ನಾ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಲೇಖನ ಸಾಮಾಗ್ರಿ, ಬ್ಯಾಗ್, ಕೊಡೆ ಮತ್ತು ಸಮವಸ್ತ್ರ ವಿತರಣೆ

Madhyama Bimba

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೋಳ ಆಯುಷ್ ಎಸ್. ಪೂಜಾರಿಗೆ ಚಿನ್ನದ ಪದಕ

Madhyama Bimba

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಪಡೀಲ್ ಮಂಗಳೂರು ಶಾಖೆ ದ. ಕ. ಜಿಲ್ಲಾಧಿಕಾರಿ ಕಾರ್ಯಾಲಯ ಪ್ರಜಾಸೌಧಕ್ಕೆ ಸ್ಥಳಾಂತರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More