ಮೂಡುಬಿದರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಸರ್ವಧರ್ಮ ಅರಿವು ಸಮ್ಮಿಲನ ಕಾರ್ಯಕ್ರಮದಲ್ಲಿ ಎಡನೀರು ಮಠದ ಸ್ವಾಮೀಜಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, “ಇಂದಿನ ಮಕ್ಕಳಲ್ಲಿ ಸರ್ವಧರ್ಮದ ಅರಿವು ಮೂಡಿಸುವುದು ಅತ್ಯಂತ ಅಗತ್ಯ. ನಮ್ಮ ಧರ್ಮದ ಬಗ್ಗೆ ಗೌರವ ಹೊಂದುವುದರ ಜೊತೆಗೆ ಇತರ ಧರ್ಮಗಳ ನಂಬಿಕೆ. ಆಚರಣೆ ಮತ್ತು ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಎಲ್ಲಾ ಧರ್ಮಗಳೂ ಅಂತಿಮವಾಗಿ ಸತ್ಯ, ಅಹಿಂಸೆ, ಶಾಂತಿ, ಪ್ರೀತಿ ಹಾಗೂ ಮಾನವೀಯತೆಯನ್ನೇ ಸಾರುತ್ತವೆ” ಎಂದರು. ಮನುಷ್ಯರಾದ ನಾವು ಅಹಿಂಸೆಯ ಮಾರ್ಗವನ್ನು ಅನುಸರಿಸಬೇಕು. ಶ್ರೀ ಕೃಷ್ಣನು ಭೋಧಿಸಿದಂತೆ ಸ್ವಧರ್ಮದ ಬಗ್ಗೆ ಗೌರವಿಸಬೇಕು. ಅದೇ ಸಂದರ್ಭದಲ್ಲಿ ಪರಧರ್ಮದ ಬಗ್ಗೆ ದ್ವೇಷವಲ್ಲ, ಪ್ರೀತಿ ಮತ್ತು ಗೌರವನ್ನು ಹೊಂದಿರಬೇಕು. ಧರ್ಮವೆಂದರೆ ಕೇವಲ ಆಚರಣೆಗಳಲ್ಲ ಅದು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುವ ಜೀವನ ಮೌಲ್ಯವಾಗಿದೆ ಎಂದು ಶ್ರೀ ಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಸಂಸ್ಥಾನಮ್. ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ತಿಳಿಸಿದರು.
ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜಯಂತಿಯ ಅಂಗವಾಗಿ ಜರಗಿದ ಸರ್ವಧರ್ಮಅರಿವು ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದ ಶ್ರೀಪಾದಂಗಳವರು.‘ ಸರ್ವೇಜನಾ ಸುಖಿನೋ ಭವಂತು” ಎಂಬ ಉದಾತ್ತ ಆಶಯದಂತೆ, ನಮ್ಮ ಸುಖದಜೊತೆಗೆ ಸಮಾಜದ ಪ್ರತಿಯೊಬ್ಬರ ಸುಖ, ನೆಮ್ಮದಿ ಮತ್ತುಗೌರವವನ್ನು ಬಯಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಜಾತಿ, ಧರ್ಮ, ಭಾಷೆ ಹಾಗೂ ಪ್ರಾಂತ್ಯದ ಭಿನ್ನತೆಗಳನ್ನು ಮೀರಿ ಮನುಷ್ಯನ್ನು ಮನುಷ್ಯನಾಗಿ ಗೌರವಿಸುವುದೇ ನಿಜವಾದ ಸಂಸ್ಕಾರ ಎಂದು ಶ್ರೀಪಾದಂಗಳವರು ಹೇಳಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಇಂತಹ ಉತ್ಕ್ರಷ್ಟ ಜೀವನಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. “ವಿದ್ಯಾರ್ಥಿಗಳೇ ನಾಳಿನ ಸಮಾಜದ ನಿರ್ಮಾತೃಗಳು, ಅವರುತಮ್ಮ ನಡೆ-ನುಡಿಗಳ ಮೂಲಕ ಧರ್ಮ, ಶಾಂತಿ ಮತ್ತು ಸೌಹಾರ್ದತೆಯ ರಾಯಭಾರಿಗಳಾಗಬೇಕು.”ಎಂದು ಕರೆ ನೀಡಿದರು.
ಕ್ರೈಸ್ತ ಧರ್ಮದ ಕುರಿತು ಪದುವ ಕಾಲೇಜ್ ಆಫ್‌ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಇಲ್ಲಿನ ಪ್ರಾಂಶುಪಾಲರು ಮತ್ತು ಕ್ಯಾನನ್ ನಿರ್ದೇಶಕರಾದ ರೆ.ಫಾ.ಅರುಣ್ ವಿಲ್ಸನ್ ಲೋಬೋ, ಮಾತನಾಡಿ ಬದುಕಿನಲ್ಲಿ ಪ್ರತಿಯೊಬ್ಬರೂ ಸಂತೋಷವಾಗಿರಬೇಕು, ನಗುನಗುತ್ತಾ ಇರಬೇಕು, ವಿದ್ಯಾರ್ಥಿಗಳು ವಿದ್ಯಾರ್ಜನೆ ಎಂದರೇನು ಎಂದು ಅರಿಯಬೇಕು ಅದರ ಜೊತೆಗೆ ನಗುವುದನ್ನು ಕಲಿಯಬೇಕು ಆಗ ಮಾತ್ರ ಕಲಿಕೆ ಸುಲಭವಾಗುತ್ತದೆ. ಸರ್ವಧರ್ಮಅರಿವು ಬಗ್ಗೆ ಮಾತನಾಡುತ್ತಾಅವರು ಎಲ್ಲಾ ಧರ್ಮಗಳ ಒಳ್ಳೆಯದನ್ನೇ ಹೇಳುತ್ತದೆ. ಕೆಟ್ಟದನ್ನು ಬಿಡಬೇಕು ಎಂದು ಹೇಳುತ್ತದೆ. ಆದರೆ ಅದನ್ನು ಅನುಸರಿಸುವ ನಾವು ಹೇಗೆ ಇದ್ದೀವಿ ಎಂಬುದನ್ನು ಅರಿಯಬೇಕು, ಬದುಕಲು ನಮಗೆ ಎಷ್ಟು ಅವಕಾಶವಿದೆಯೋ ಹಾಗೇಯೆ ಬೇರೆಯವರಿಗೆ ಬದುಕುವ ಹಕ್ಕಿದೆ ಎಂದು ಹೇಳುತ್ತಾ ಎಲ್ಲರನ್ನೂ ಪ್ರೀತಿಸಬೇಕು. ಎಲ್ಲಾ ಧರ್ಮಗಳನ್ನೂ ಪ್ರೀತಿಸಬೇಕು. ಜನ ಸೇವೆಯೇ ಜನಾರ್ಧನಾ ಸೇವೆ ಹಾಗಾಗಿ ಪ್ರತಿಯೊಬ್ಬ ಕಷ್ಟದವರಿಗೆ ಸೇವೆ ಮಾಡಿದರೆ ಅದು ದೇವರಿಗೆ ತಲುಪುತ್ತದೆ. ದೇವರು ಎಲ್ಲಾ ಕಡೆ ನೆಲೆಸಿದ್ದಾನೆ. ಧರ್ಮ ಹೇಳಿದ ಪಾವಿತ್ರ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಸಂಸ್ಕಾg ಕಲಿಯಬೇಕು. ಜ್ಞಾನದಿಂದ ಯಾವತ್ತೂ ನಾವು ಅಹಂಕಾರಿಗಳಾಗಬಾರದು. ದ್ವೇಷ ಪರಸ್ಪರ ಕಿತ್ತಾಟ ಇದರಿಂದ ಧರ್ಮದ ಸ್ವಾದ ಪಡೆಯಲು ಸಾಧ್ಯವಿಲ್ಲ. ಪ್ರೀತಿಸರಳತೆ ನಂಬಿಕೆ ಮನುಷ್ಯತ್ವ ಇದರಿಂದ ಮಾತ್ರಧರ್ಮದ ಸವಿಯನ್ನುಕಾಣಲು ಸಾಧ್ಯ. ಇಂದಿನ ಮನೆಗಳಲ್ಲಿ ಮನುಷ್ಯರಿದ್ದಾರೆ ಆದರೆ ಮನಿಷ್ಯತ್ವ ಕೊರತೆ ಕಾಣುತ್ತಿದೆ ಇಲ್ಲಿ ನಾವು ಮನುಷ್ಯರು ಮನುಷ್ಯತ್ವವನ್ನು ರೂಢಿಸಿಕೊಳ್ಳಬೇಕು.
ಇತರರು ನಿನಗೆ ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಇತರರಿಗೆ ನೀವು ಮಾಡಿ ಇದರಿಂದ ನಾವು ಮಾನವೀಯತೆಯನ್ನು ಸಾರಬೇಕಾಗಿದೆ ನಾವು ಯಾವುದೇ ಧರ್ಮದಲ್ಲಿ ಹುಟ್ಟಿರಬಹುದು ಆದರೆ ಸಾಯುವಾಗ ಒಳ್ಳೆಯ ವ್ಯಕ್ತಿಗಳಾಗಿ ಸಾಯಬೇಕು. ಅಂತಹ ಸಂಸ್ಕಾರ ಈ ವಿದ್ಯಾಸಂಸ್ಥೆ ನೀಡುತ್ತಿದೆಅದನ್ನು ವಿದ್ಯಾರ್ಥಿಗಳು ತಮ್ಮಜೀವನದಲ್ಲಿ ಅಳವಡಿಸಕೊಳ್ಳಬೇಕು. ಕತ್ತಲು ಓಡಿಸುವ ದೀಪಗಳಾಗಬೇಕು. ತಂದೆತಾಯಿ ಹಾಗೂ ಹಿರಿಯರು ಕಿರಿಯರು ಗುರುಗಳನ್ನು ಗೌರವಿಸಬೇಕು ಎಂದು ಹೇಳಿದರು.
ನಂತರ ಇಸ್ಲಾಂ ಧರ್ಮದ ಕುರಿತು ಮಾತನಾಡಿದ ಪುತ್ತೂರಿನ ಸರ್ಕಾರಿ ಪದವಿ ಪೂರ್ವಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಎಲ್ಲಾ ಧರ್ಮಗಳನ್ನು ಗೌರವಿಸದಿರುವವನು ಉತ್ತಮ ಶಿಕ್ಷಕನಾಗಲು ಅರ್ಹನಲ್ಲ. ಇಂದು ರಾಷ್ಟ್ರಪಿತನ ಜನ್ಮ ದಿನದಂದು ಇಂತಹ ಸರ್ವಧರ್ಮದ ಅರಿವು ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಿದ್ದು ಸಂಸ್ಥೆಯ ಸಂಸ್ಕಾರಯುತ ಶಿಕ್ಷಣಕ್ಕೆ ಹಿಡಿದಕೈಗನ್ನಡಿಯಾಗಿದೆ. ಇಸ್ಲಾಂಧರ್ಮದ ನಂಬಿಕೆಯ ಪ್ರಕಾರ ದೇವರಿಗೆ ಶರಣಾಗುವುದೇ ಇಸ್ಲಾಂ ಎನ್ನುವುದು. ಶಾಂತಿ ಮತ್ತು ಏಕ ದೇವರನ್ನು ನಂಬುವುದೇ ಧರ್ಮದ ತಿರುಳಾಗಿದೆ ಒಟ್ಟಿನಲ್ಲಿ ಶಾಂತಿಯನ್ನು ಸಾರುವುದೇ ಇಸ್ಲಾಂ ಧರ್ಮವಾಗಿದೆ. ಮಾನವೀಯತೆ ಮತ್ತು ಸಮಾನತೆಇದರ ಮುಖ್ಯ ತಿರುಳು ಇಲ್ಲಿಎಲ್ಲಾ ಧರ್ಮಗಳು ಹೇಳಿದ್ದು ಮೋಕ್ಷ ಪಡೆಯುವುದೇ ಆಗಿದೆ ಸೃಷ್ಠಿಕರ್ತನಿಗೆ ದಿನಕ್ಕೆ ಐದು ಬಾರಿತಲೆಬಾಗಬೇಕು ಎಂಬುದನ್ನು ಇಸ್ಲಾಂಧರ್ಮ ಸಾರುತ್ತದೆ.
ಧರ್ಮಗಳು ಹೇಳಿದ ಹಾಗೆ ಬದುಕುವವರೇ ಧರ್ಮದ ಅನುಯಾಯಿಗಳಾಗುತ್ತಾರೆ. ಯಾರಿಗೂ ಹಿಂಸೆ ನೀಡಬಾರದು ಎಂಬುದನ್ನು ಧರ್ಮಗಳು ಸಾರುತ್ತವೆ ಆದರೇ ಅದನ್ನು ಅನುಸರಿಸುವ ಮನುಷ್ಯರು ಧರ್ಮದ ಅರಿವನ್ನು ಹೊಂದಬೇಕು. ಯಾವುದೇ ಮೋಸ ಕಳ್ಳತನ ಅನ್ಯಾಯಗಳನ್ನು ಮಾಡಿದರೆ ಧರ್ಮದ ಮೌಲ್ಯಗಳು ಕಡಿಮೆಯಾಗುತ್ತವೆ. ಆದ್ದರಿಂದ ಮನುಷ್ಯ ಒಳ್ಳೆಯವನಾಗಿ ಬದುಕಬೇಕು. ಗಾಂಧೀಜಿಯವರು ಹೇಳಿದ ಸಪ್ತ ಪಾತಕಗಳನ್ನು ಸ್ಮರಿಸಿ ಅಂತಹ ಪಾತಕಗಳನ್ನು ಮನುಷ್ಯ ಮಾಡಬಾರದು ಎಂದು ಹೇಳುತ್ತಾ ಎಕ್ಸಲೆಂಟ್ ವಿದ್ಯಾಸಂಸ್ಥೆ ಉತ್ತಮ ಚಾರಿತ್ರಿಕ ಶಿಕ್ಷಣವನ್ನು ನಿಮಗೆ ನಿಡುತ್ತಿದೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಜೈನಧರ್ಮದ ಕುರಿತು ಮಾತನಾಡಿದ ಮೂಡುಬಿದಿರೆಯ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ದೇಶಕಟ್ಟುವ ಕಾಯಕದಲ್ಲಿ ತೊಡಗಿಕೊಂಡಿದೆ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಧನ್ಯರು. ಧರ್ಮಗಳುಒಂದುಗೂಡಿ ಬದುಕುವ ಸುಂದರ ಸಂದೇಶವನ್ನು ಈ ಸಂಸ್ಥೆ ಇಂದು ಸಾದರಪಡಿಸಿತು. ಸತ್ಯ ಅಹಿಂಸೆ ಅಪರಿಗ್ರಹಎನ್ನುವುದು ಜೈನ ಧರ್ಮದ ಸಿದ್ದಾಂತಗಳು. ಪ್ರಾಣಿಗಳಿಗೂ ಮನುಷ್ಯನಿಗೆ ವ್ಯತ್ಯಾಸ ತಿಳಿಸುವುದೇ ಧರ್ಮ. ಭಾರದಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯಇಲ್ಲಿ ಹಲವಾರು ಧರ್ಮಗಳಿವೆ ಆಷರಣೆಗಳಿವೆ ಸಂಸ್ಕ್ರತಿಗಳಿವೆ ಆದರೂ ನಾವೆಲ್ಲರೂಒಂದೇಎನ್ನುವ ನಮಸ್ಥಿತಿ ಭಾರತಿಯರದ್ದು. ಮಸೀದಿಗೆ ಹೋಗುವುದರಿಂದ ನಾವು ಮುಸ್ಲಿಂ ಆಗುವುದಿಲ್ಲ ಚರ್ಚ್ಗೆ ಹೋಗುವುದರಿಂದ ನಾವು ಕ್ರೈಸ್ತರಾಗುವುದಿಲ್ಲ ದೇವಸ್ಥಾನಗಳಿಗೆ ಹೋಗುವುದರಿಂದ ಹಿಂದುಗಳಾಗುವುದಿಲ್ಲ ಬಸದಿಗಳಿಗೆ ಹೋಗುವುದರಿಮದ ಜೈನರಾಗುವುದಿಲ್ಲ ಎಲ್ಲಧರ್ಮದತಾತ್ವಿಕ ನೆಲೆಯನ್ನುಅರ್ಥ ಮಾಡಿಕೊಳ್ಳಬೇಕು. ನೀವು ಯಾವಧರ್ಮದಲ್ಲಿ ಹುಟ್ಟಿದೇವೆಯೋ ಆ ಧರ್ಮವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಆಚರಿಸಬೇಕು. ಜೈನಧರ್ಮದ ಸಾರ ಅಹಿಂಸಾ ಪರಮೋಧರ್ಮ ಅಹಿಂಸೆಯೇ ಜೈನ ಧರ್ಮದ ಮೂಲ ಮಂತ್ರವಾಗಿದೆ. ಇಲ್ಲಿನ ಪ್ರತಿಯೊಂದು ಆಚಾರವೂ ಅಹಿಂಸೆಯ ನೆಲೆಯಲ್ಲಿರುತ್ತದೆ. ಮತಗಳೆಲ್ಲವೂ ಪಥಗಳೆನ್ನುವ ಹೊಸ ಎಚ್ಚರದೊಳು ಬದುಕೋಣ. ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮಿನ ಕೋಟೆಯಲ್ಲಿಎಂದು ಹೇಳಿದ ಕವಿ ಶಿವರುದ್ದಪ್ಪ ಅವರ ಸಾಲುಗಲನ್ನು ತಿಳಿಸುತ್ತಾ ನಿನ್ನ ಮತ್ತುಇತರರ ಧರ್ಮಗಳನ್ನು ಮತ್ತುಅದರ ಸಿದ್ಧಾಂತಗಳನ್ನು ತಿಳಿದು ಗೌರವಿಸುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಎಲ್ಲಾ ಧರ್ಮಗಳಿಗೂ ಮಿಗಿಲಾದ ಧರ್ಮ ಎಂದರೆ ಅದು ಮಾನವಧರ್ಮ. ನಿನಗೆ ಯಾರೂಏನನ್ನೂ ಮಾಡಬಾರದೂ ಎಂದು ಭಾವಿಸುತ್ತಿಯೋ ಅದನ್ನು ನೀನು ಬೇರೆಯವರಿಗೂ ಮಾಡಬೇಡ ಎಂದು ಹೇಳುವುದೇ ಧರ್ಮ.ಎಲ್ಲಾ ಧರ್ಮಗಳು ಹೇಳುವ ಒಳ್ಳೆಯದನ್ನು ಮನುಷ್ಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಡೀ ಜಗತ್ತೆ ಒಂದು ಕುಟುಂಬ, ಧರ್ಮ ಧರ್ಮಗಳ ನಡುವೆಘರ್ಷಣೆ ಇರಬಾರದು. ಘರ್ಷಣೆ ಇರಬೇಕು ಅದು ಧರ್ಮ ಅಧರ್ಮದ ನಡುವೆ ಹಾಗಾಗಿ ಧರ್ಮಗಳಲ್ಲಿ ಸಮನ್ವಯತೆ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ ಪ್ರೀತಿ ಮತ್ತು ಶಾಂತಿಯಿಂದ ಎಲ್ಲಾವನ್ನು ಗೆಲ್ಲಬಹುದು, ಬದುಕು ಬದುಕಲು ಬಿಡು ಎಂಬುದನ್ನು ಧರ್ಮಗಳು ಸಾರುತ್ತದೆ. ಮಹತ್ಮಾಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಇದೆಲ್ಲವನ್ನು ನಮಗೆ ಧರ್ಮಗಳು ಬೋಧಿಸುತ್ತವೆ, ನಾವೂ ಯಾರಲ್ಲಿಯೂ ದ್ವೇಷ ಭಾವನೆ ಹೊಂದುವುದು ಬೇಡ, ಸ್ವಾಮೀಜಿಗಳ ಆರ್ಶಿವಾದದಿಂದ ನಾವೇಲ್ಲರೂ ಉತ್ತಮ ನಾಗರಿಕರಾಗಿ ಬದುಕೋಣ, ನಿಮ್ಮಲ್ಲಿರುವ ಋಣಾತ್ಮಕ ಚಿಂತನೆಗಳನು ತೆಗೆದುಹಾಕಿ ಬದುಕಲ್ಲಿ ಸಾರ್ಥಕತೆಯನ್ನು ಪಡೆಯಬೇಕು, ಎಲ್ಲಾ ಧರ್ಮಗಳ ಸಾರ ಒಂದೇ ಆಗಿದೆ ಅದುವೆ ಒಳ್ಳೆಯತನ, ಅದರೊಂದಿಗೆಎಲ್ಲರೂ ನಮ್ಮವರೂಎನ್ನುವಗುಣವನ್ನು ಬೆಳೆಸಿಕೊಳ್ಳಬೇಕು ಎಂದುಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಬಿ ಪಿ ಸಂಪತ್ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಪುಷ್ಪರಾಜ್ ಬಿ, ಎಕ್ಸಲೆಂಟ್ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ ಭಟ್, ಎಕ್ಸಲೆಂಟ್ ಸಿಬಿಎಸ್‌ಸಿ ಪ್ರಾಂಶುಪಾಲರಾದ ಪ್ರಸಾದ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಹಳೇ ವಿದ್ಯಾರ್ಥಿನಿ ಮೌಲ್ಯ ವೈ ಆರ್ ಜೈನ್ ಹಾಡಿದ ಒಲವೇ ನನ್ನೊಲವೇ ಎಂಬ ಪರಿಸರ ಪ್ರೇಮವನ್ನು ಸಾರುವ ಆಲ್ಬಮ್ ಗೀತೆಯನ್ನು ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತವಿಕ ನುಡುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ವಿಜೇತ ಜೈನ್ ವಿದ್ಯಾರ್ಥಿಗಳಾದ ಸರ್ವದಾ, ಗಗನ ನಿರೂಪಿಸಿದರು ಆರ್ಯನ್ ಕಶ್ಯಪ್, ನೇತ್ರಾವತಿ, ಪೂರ್ವಿಜೈನ್ ಅತಿಥಿಗಳನ್ನು ಪರಿಚಯಿಸಿದರು. ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ವಂದಿಸಿದರು.
