ಕಾರ್ಕಳ

ಕೆರ್ವಾಶೆ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಂಗ್ಲೆಗುಡ್ಡೆ, ಕೆರ್ವಾಶೆ ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಾಮಾಜಿಕ ಕಾರ್ಯಕರ್ತರಾದ ದಯಾನಂದ ಸಾಲಿಯಾನ್, ಕೆರ್ವಾಶೆ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷರಾದ ನಾರಾಯಣ ಗುಡಿಗಾರ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುನೀತಾ ಪೂಜಾರಿ, ಸುನಿಲ್ ಶೆಟ್ಟಿ, ಧರ್ಮರಾಜ್ ಹೆಗ್ಡೆ, ರಾಮಣ್ಣ ಸೇರ್ವೆಗಾರ್, ರಮಾನಂದ ಗುಡಿಗಾರ್, ಜಯಾನಂದ ಪೂಜಾರಿ, ಲಕ್ಷ್ಮಣ ಪೂಜಾರಿ, ಶ್ರೀಮತಿ ವೀಣಾ ಕಾರ್ಣಿಕ್, ಶ್ರೀಮತಿ ಮಾಲತಿ ಗುಡಿಗಾರ್ ಉಪಸ್ಥಿತರಿದ್ದರು.

ನಂತರ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣೆ ನಡೆಯಿತು. ಶಾಲೆಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಶಿಕ್ಷಕಿ ಶ್ರೀಮತಿ ಸುನೀತಾ ನಾಯಕ್ ಸ್ವಾಗತಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಕುಮಾರಿ ಸುಪ್ರೀತಾ, ಗೌರವ ಶಿಕ್ಷಕಿ ವಾಚಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಅಶ್ವಿನಿ ಜ್ಞಾನದೀಪ, ಶಿಕ್ಷಕಿ ನಿರ್ವಹಿಸಿದರು.

Related posts

ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎಸ್. ಪ್ರವೀಣ್ ಕುಮಾರ್

Madhyama Bimba

ಕೃಷ್ಣೋತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Madhyama Bimba

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಗೋಲ್ಡ್ ಲೋನ್ ನಲ್ಲಿ ಪ್ರತಿ ಗ್ರಾಂಗೆ ರೂ. 9500 ಸಾಲ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More