ಕಾರ್ಕಳ

ಅಜೆಕಾರು: ಆರ್ಟ್ ಆಫ್ ಲಿವಿಂಗ್ ವತಿಯಿಂದ ಯೋಧ ನಮನ- ನಿವೃತ್ತ ಸೈನಿಕರು ಹಾಗೂ ರೈತ ಮಹಿಳೆಗೆ ಸನ್ಮಾನ

ಕಾರ್ಕಳ : ರವಿಶಂಕರ್ ಗುರುಜಿಯವರ ಆರ್ಟ್ ಆಫ್ ಲಿವಿಂಗ್ ವತಿಯಿಂದ 2ನೇ ವರ್ಷದ ಯೋಧ ನಮನ ಕಾರ್ಯಕ್ರಮ ವು ಅಜೆಕಾರು ರಾಮ ಮಂದಿರದಲ್ಲಿ ಆ. 19ರಂದು ನಡೆಯಿತು.


ಈ ಕಾರ್ಯಕ್ರಮವನ್ನು ಭಾರತೀಯ ಭೂಸೇನೆಯ ನಿವೃತ್ತ ಯೋಧ ಜಯ ಮೂಲ್ಯ ಉದ್ಘಾಟಿಸಿದರು.

ದೇಶದ ಗಡಿಯನ್ನು ಕಾಯುವ ಸೈನಿಕರ ಪರವಾಗಿ ಭೂಸೇನೆಯ ನಿವೃತ್ತ ಸೈನಿಕ ಜಯ ಮೂಲ್ಯ, ಕಾರ್ಕಳ ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಪರವಾಗಿ ರೈತ ಮಹಿಳೆ ಅಜೆಕಾರಿನ ರಾಧಾ ನಾಯಕ್ ಇವರನ್ನು ಗೌರವಿಸಲಾಯಿತು.


ಗೌರವ ಸ್ವೀಕರಿಸಿ ಮಾತನಾಡಿದ ಜಯ ಮೂಲ್ಯ ತಾವು ಭೂಸೇನೆಯಲ್ಲಿ ಸಲ್ಲಿಸಿದ್ದ ಸುಧೀರ್ಘ 21 ವರ್ಷಗಳ ಸೇವೆಯ ಅನುಭವವನ್ನು ಹಂಚಿಕೊಂಡರು.

ಈ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ, ನಂದಕುಮಾರ್ ಹೆಗ್ಡೆ, ಸಂತೋಷ್ ಪೂಜಾರಿ, ರಮೇಶ್ ನಾಯಕ್, ನಿವೃತ್ತ ಶಿಕ್ಷಕ ಲಕ್ಷ್ಮಣ್ ಕುಕ್ಕುಜೆ, ಹರೀಶ್ ನಾಯಕ್, ಅಜೆಕಾರು ಉದ್ಯಮಿ ಬಾಲಕೃಷ್ಣ ಹೆಗ್ಡೆ, ಮುಂತಾದವರು ಉಪಸ್ಥಿತರಿದ್ದರು.
ಆರ್ಟ್ ಆಫ್ ಲಿವಿಂಗ್‌ನ ಸದಸ್ಯರು ಈ ಸಂದರ್ಭದಲ್ಲಿದ್ದರು.

ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕಿ ಶ್ರೀಮತಿ ಮನಿಷಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Related posts

ಕಾರ್ಕಳ ತಾಲೂಕು ಗುಡಿಗಾರ ಸಮಾಜ ಸಂಘ ಕೆರ್ವಾಶೆ ವತಿಯಿಂದ ಗಿಡ ನೆಡುವ ಹಾಗೂ ಸ್ವಚ್ಛತಾ  ಕಾರ್ಯಕ್ರಮ

Madhyama Bimba

ಕ್ರೈಸ್ಟ್‌ಕಿಂಗ್: ಪತ್ರಿಕಾ ದಿನಾಚರಣೆ

Madhyama Bimba

ಸೂರಾಲು: 80ನೇ ಸ್ವಾತಂತ್ರ್ಯ ದಿನಾಚರಣೆ-ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More