ಮೂಡುಬಿದಿರೆ

ಸೆ. 6: ಮೂಡುಬಿದಿರೆಯಲ್ಲಿ ನಾರಾಯಣಗುರು ಜನ್ಮದಿನಾಚರಣೆ – ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ

ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣಗುರು ಸೇವಾದಳ ಹಾಗೂ ಶ್ರೀ ನಾರಾಯಣಗುರು ಮಹಿಳಾ ಘಟಕದ ನೇತೃತ್ವದಲ್ಲಿ ಸೆ. 6ರಂದು ಬ್ರಹ್ಮಶ್ರೀ ನಾರಾಯಣ ಗುರುವಿನ 172ನೇ ಜನ್ಮದಿನಾಚರಣೆ, ಮೂರ್ತಿ ಪ್ರತಿಷ್ಠಾಪನೆಯ 40ನೇ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಈ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿಲ್ಲವ ಸಂಘದಲ್ಲಿ ಗುರುವಾರ ನಡೆಯಿತು.

ಸಂಘದ ಅಧ್ಯಕ್ಷ ನವೀನ್ಚಂದ್ರ ಕರ್ಕೇರ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಕೋಶಾಧಿಕಾರಿ ನವಾನಂದ, ಉಪಾಧ್ಯಕ್ಷರಾದ ಮುರಳೀಧರ ಕೋಟ್ಯಾನ್, ಸುಭಾಶ್ ಪೂಜಾರಿ ಕೈಪುಂಡಿ, ಜೊತೆ ಕಾರ್ಯದರ್ಶಿ ಭವಿಷ್ಯತ್ ಕೋಟ್ಯಾನ್, ಮಾತೃ ಸಂಸ್ಥೆ, ಸೇವಾದಳ ಮತ್ತು ಮಹಿಳಾ ಘಟಕದ ಸಂಚಾಲಕ ರವೀಂದ್ರ ಎಂ. ಸುವರ್ಣ, ಸಂಘಟನಾ ಕಾರ್ಯದರ್ಶಿ ಸದಾನಂದ ಬಿ. ಪೂಜಾರಿ, ಕ್ರೀಡಾ ಕಾರ್ಯದರ್ಶಿ ಶಶಿಧರ, ಅಂಚನ್ ಎನಿಕ್ರಿಪಲ್ಲ, ಆಡಳಿತ ಮಂಡಳಿಯ ಸದಸ್ಯರಾದ ಸುರೇಶ್ ಕೋಟ್ಯಾನ್, ಶಿವಾನಂದ ಅಂಚನ್, ಸುಶಾಂತ್ ಕರ್ಕೇರ, ನವೀನ್ ಪಿ. ಕುಂದರ್, ಹರಿದೀಪ್, ಗೌರವ ಸಲಹೆಗಾರರಾದ ಪಿ.ಕೆ. ರಾಜು ಪೂಜಾರಿ, ವಾಸು ಪೂಜಾರಿ, ಉದ್ಯಮಿ ನಾರಾಯಣ್ ಪಿ.ಎಂ., ರುಕ್ಕಯ್ಯ ಪೂಜಾರಿ, ಖಾಯಂ ಆಹ್ವಾನಿತರಾದ ರಾಮ ಕೋಟ್ಯಾನ್, ನಾರಾಯಣ್ ಪಿ. ಕೋಟ್ಯಾನ್, ಸೇವಾದಳದ ಅಧ್ಯಕ್ಷ ಶಶಿಕಿರಣ್ ಕಲ್ಲಬೆಟ್ಟು, ಕಾರ್ಯದರ್ಶಿ ಹರೀಶ್ ಎಂ.ಬೆಳುವಾಯಿ, ಸದಸ್ಯ ರಾಜೇಶ್ ಸುವರ್ಣ ಉಪಸ್ಥಿತರಿದ್ದರು.


ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಜಿತೇಶ್, ಕಾರ್ಯದರ್ಶಿ ಸುಶ್ಮಿತಾ ಕೋಟ್ಯಾನ್, ಉಪಾಧ್ಯಕ್ಷರಾದ ಮಮತಾ ನಾರಾಯಣ್, ಪೂರ್ಣಿಮಾ ಬಾಲಕೃಷ್ಣ, ಜೊತೆ ಕಾರ್ಯದರ್ಶಿಗಳಾದ ಸುರೇಖಾ ಹರೀಶ್, ವಿಶಾಲ ಉಮೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಸುಮಾ ರಂಜಿತ್, ಸಂಘಟನಾ ಕಾರ್ಯದರ್ಶಿ ವಿನುತಾ ಆನಂದ್, ಗೌರವ ಸಲಹೆಗಾರರಾದ ಯೋಗಿತಾ ನವಾನಂದ್, ಸವಿತಾ ದಿನೇಶ್, ಉಷಾ ಮಧುಕರ್, ಸಾವಿತ್ರಿ ಕೇಶವ್ ಉಪಸ್ಥಿತರಿದ್ದರು.

Related posts

ಆದಿದ್ರಾವಿಡ ಜನರ ಬೇಡಿಕೆಗಳಿಗೆ ಸರಕಾರ ನಿರಾಸಕ್ತಿಗೆ ಆಕ್ರೋಶ

Madhyama Bimba

ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾಟ 2024: ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Madhyama Bimba

ಪ್ರಶಾಂತ್ ಲೆಕ್ಕ ಸಹಾಯಕರಾಗಿ ಪದೋನ್ನತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More