ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್‌ವಾದ ಕಾರ್ಕಳ ಶಾಖೆ ಇದರ ಕಾರ್ಕಳ ತಾಲೂಕು ನೂತನ ಪ್ರಧಾನ ಸಂಚಾಲಕರಾಗಿ ಅತ್ಯಂತ ಅಧಿಕ ಮತದಿಂದ ರಮೇಶ್ ಬಿ. ಪೆರ್ವಾಜೆ ಆಯ್ಕೆಯಾಗಿರುತ್ತಾರೆ.
ಚುನಾವಣಾಧಿಕಾರಿಯಾಗಿ ಉಡುಪಿ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್, ಉಡುಪಿ ವಿಭಾಗೀಯ ಸಂಚಾಲಕರಾದ ಶ್ಯಾಮ್‌ರಾಜ್ ಭಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರು, ವಕೀಲರಾದ ಟಿ. ಮಂಜುನಾಥ ಗಿಳಿಯಾರು ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿದರು.
