ಕಾರ್ಕಳಹೆಬ್ರಿ

ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಜಿಲ್ಲಾ ಬ್ಯಾಂಕಿನ ಪ್ರಶಸ್ತಿ

2025-2026ನೇ ಸಾಲಿನಲ್ಲಿ ಶೇ. 100% ಸಾಲ ವಸೂಲಿ, ರೂ. 1.12 ಕೋಟಿ ನಿವ್ವಳ ಲಾಭ ಗಳಿಸಿ ವ್ಯವಹಾರ ಅಭಿವೃದ್ಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ ಲಭಿಸಿದೆ.

ದಿನಾಂಕ 22-08-2026ರಂದು ಜರಗಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ |ಎಂ. ಎನ್. ರಾಜೇಂದ್ರ ಕುಮಾರ್ ರವರು ಪ್ರಶಸ್ತಿ ಪ್ರಧಾನ ಮಾಡಿದರು.

ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಎಲ್. ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ನವೀನ್ ಎಂ. ಸುವರ್ಣ ಪ್ರಶಸ್ತಿ ಸ್ವೀಕರಿಸಿದರು. ಸಂಘವು ರೂ. 69 ಕೋಟಿ ದುಡಿಯುವ ಬಂಡವಾಳ, ರೂ. 42 ಕೋಟಿ ಠೇವಣಿಗಳು, ರೂ. 48.50 ಕೋಟಿ ಸಾಲ ಹೊರಬಾಕಿ ಹೊಂದಿದ್ದು 2024-2025 ನೇ ಸಾಲಿನಲ್ಲಿಯೂ 100% ಸಾಲ ವಸೂಲಾತಿ ಸಾಧನೆ ಮಾಡಿ ಪ್ರಶಸ್ತಿಯನ್ನು ಗಳಿಸಿತ್ತು.

ಈ ಸಂದರ್ಭದಲ್ಲಿ ಎಸ್. ಸಿ. ಡಿ. ಸಿ. ಸಿ. ಬ್ಯಾಂಕಿನ ನಿರ್ದೇಶಕರಾದ   ವಾದಿರಾಜ ಶೆಟ್ಟಿ,   ಭಾಸ್ಕರ್ ಎಸ್. ಕೋಟ್ಯಾನ್ ಹಾಗೂ ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ, ನವೋದಯ ಚಾರಿಟೇಬಲ್ ಟ್ರಸ್ಟಿನ ನಿರ್ದೇಶಕರಾದ   ಸುನಿಲ್ ಕುಮಾರ್ ಬಜಗೋಳಿ, ಕೆ.ಎಂ.ಎಫ್.ನ ನಿರ್ದೇಶಕರಾದ   ಸುಧಾಕರ ಶೆಟ್ಟಿ, ಉಡುಪಿ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ   ಜಯಕರ ಶೆಟ್ಟಿ ಇಂದ್ರಾಳಿ, ನಿರ್ದೇಶಕರಾದ   ಅನಿಲ್ ಎಸ್. ಪೂಜಾರಿ, ಸಹಕಾರ ಸಂಘಗಳ ವಲಯ ಮೇಲ್ವಿಚಾರಕರಾದ   ಜಯಂತ್ ಕುಮಾರ್, ಸಂಘದ ಉಪಾಧ್ಯಕ್ಷರಾದ   ನಾಗೇಶ್ ಭಂಡಾರಿ, ನಿರ್ದೇಶಕರಾದ   ವೆಂಕಟೇಶ್ ಗೋರೆ ಉಪಸ್ಥಿತರಿದ್ದರು

Related posts

ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು : ನೇಮಿರಾಜ ರೈ

Madhyama Bimba

ಗಣಿತ ನಗರ :-ಕಾರ್ಕಳ ಜ್ಞಾನಸುಧಾ ಜಂಪ್ ರೋಪ್ ನಲ್ಲಿ ರಾಜ್ಯಮಟ್ಟಕ್ಕೆ

Madhyama Bimba

ಜ್ಞಾನಸುಧಾ : ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More