ಕಾರ್ಕಳಹೆಬ್ರಿ

ಮಾತಮರಿಯಾ ಮಹಿಳಾ ಮಹಾ ಸಂಘದಿಂದ ಕೊಂಕಣಿ ಮಾನ್ಯತಾ ದಿವಸ್ ಆಚರಣೆ

ಮಾತಮರಿಯಾ ಮಹಿಳಾ ಮಹಾ ಸಂಘದಿಂದ” ಕೊಂಕಣಿ ಮಾನ್ಯತಾ ದಿವಸ್ – 2026″ ಹಾಗೂ ” ಪಾವ್ಸಿಲೆ ಖಾಣ್ ಜೆವಾಣ್ ” ಕಾರ್ಯಕ್ರಮವು ಆ. 20ರಂದು ಕಣಜಾರು ಸೌಹಾರ್ದ ಭವನದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೂರ್ಡ್ಸ್ ಮಾತಾ ದೇವಾಲಯದ ಧರ್ಮಗುರುಗಳಾದ ಅತೀ ವಂದನೀಯ ಫಾ| ಹೆರಾಲ್ಡ್ ಪೀರೆರಾ ವಹಿಸಿದ್ದರು.


ಮುಖ್ಯ ಅತಿಥಿಯಾಗಿ ಕೊಂಕಣಿ ಶಿಕ್ಷಕರಾದ ರೋಬರ್ಟ್ ಮಿನೇಜಸ್, ನಿವೃತ್ತ ಗುರುಗಳಾದ ಫಾ| ಫೆಡ್ರಿಕ್ ಡಿಸೋಜ, ಸಂಪದ ಸಂಸ್ಥೆ ಉಡುಪಿ ಇದರ ಸಂಯೋಜಕರಾದ ಸ್ಟಾನ್ಲಿ ಫೆರ್ನಾಂಡೀಸ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸ್ಟಾನಿ ಸಲ್ಡಾನ್ನಾ, ಕಾರ್ಯದರ್ಶಿ ಅಂತೋನಿ ಮಿರಾಂದ, 20 ಆಯೋಗಗಳ ಸಂಯೋಜಕಿ ಶ್ರೀಮತಿ ಅನಿತಾ ಕ್ವಾಡ್ರಸ್, ಪ್ರಾಸ್ಸಿಸ್ಕನ್ ಸಂಘದ ಅಧ್ಯಕ್ಷ ಪಾಸ್ಕಲ್ ಬ್ರಿಟ್ಟೊ, ಭಾರತೀಯ ಕಥೋಲಿಕ್ ಯುವ ಸಂಚಾಲನದ ಅಧ್ಯಕ್ಷ ಎಲ್ಸನ್ ನೊರೊನ್ನ, ಸಂಪದ ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ಪ್ರಿಯಾ ಕ್ವಾಡ್ರಸ್, ಮಾತಾಮರಿಯ ಮಹಿಳಾ ಮಹಾ ಸಂಘದ ಅಧ್ಯಕ್ಷ ಶ್ರೀಮತಿ ವಿಲ್ಮಾ ಮಿರಾಂದ, ಕಾರ್ಯದರ್ಶಿ ಟ್ರೇಸಿ ಮಿರಾಂದರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕೊಂಕಣಿ ಮಾನ್ಯತ ದಿವಸ – 2026 ಇದರ ಅಂಗವಾಗಿ “ಕೊಂಕ್ಣಿ ಸ್ವಾದ್ ” ಎಂಬ ಸ್ಮರಣ ಸಂಚಿಕೆ ಪುಸ್ತಕ ರೋಬರ್ಟ್ ಮಿನೇಜಸ್ ರವರು ಬಿಡುಗಡೆ ಮಾಡಿ ಕೊಂಕಣಿ ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರ್ಪಡೆಯಾಗಿ 35 ವರ್ಷ ಗಳಾಗಿದ್ದು, ಕೊಂಕಣಿ ಭಾಷೆ ನಡೆದುಬಂದ ಹಾಗೂ ಕೊಂಕಣಿ ಭಾಷಿಗರ ಬಗ್ಗೆ ತಿಳಿಸಿದರು.


ಮಹಾ ಸಂಘದ ಅಧ್ಯಕ್ಷೆ ಶ್ರೀಮತಿ ವಿಲ್ಮಾ ಮಿರಾಂದಾ ಸ್ವಾಗತಿಸಿ, ಶ್ರೀಮತಿ ಜೊವಿಟಾ ಮೆಂಡೊನ್ಸಾ ದನ್ಯವಾದವಿತ್ತರು. ಶ್ರೀಮತಿ ಸ್ಲೊಬಿನ್ ಸಲ್ಡಾನ್ನಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ 13 ಸ್ವ-ಸಂಘದ ಸದಸ್ಯರು 13 ವಿವಿಧ ಬಗೆಯ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ತಯಾರಿಸಿದ್ದರು.

Related posts

ಜೋಡುರಸ್ತೆ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ

Madhyama Bimba

ಚಿಕ್ಕಲ್‌ಬೆಟ್ಟು ಶಾಲೆಯಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆ ಉದ್ಘಾಟನೆ

Madhyama Bimba

ಕಾರ್ಕಳ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ವಿಶ್ವ ಬೈಸಿಕಲ್ ದಿನ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More