ನೆಲ್ಲಿಕಾರು ವಿಶ್ವಕರ್ಮ ಮಹಿಳಾ ಮಂಡಳಿ ನೇತೃತ್ವದಲ್ಲಿ ನೆಲ್ಲಿಕಾರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ವರಮಹಾಲಕ್ಷ್ಮಿ ಪೂಜೆ ಜರುಗಿತು.
ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಹರೀಶ್ ಆಚಾರ್ಯ ಮತ್ತು ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಭಾ ಹರೀಶ್ ಆಚಾರ್ಯ ಪೂಜಾ ವ್ರತಧಾರಿಗಳಾಗಿ ಭಾಗವಹಿಸಿದ್ದರು. ಚಂದ್ರಹಾಸ್ ಪುರೋಹಿತ್ ನೇತೃತ್ವದಲ್ಲಿ ಪೂಜೆ ನೆರವೇರಿತು.
ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ರಮೇಶ್ ಆಚಾರ್ಯ, ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಉಪಾಧ್ಯಕ್ಷ ಪುರುಷೋತ್ತಮ ಆಚಾರ್ಯ, ಗ್ರಾಮ ಮೊಕ್ತೇಸರರಾದ ಕರುಣಾಕರ ಆಚಾರ್ಯ, ಮಹಿಳಾ ಮಂಡಳಿ ರಾಧಿಕಾ ಶಂಕರ್ ಆಚಾರ್ಯ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಶ್ವಕರ್ಮ ಮಹಿಳಾ ಮಂಡಳಿಗೆ ನಂತರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಾಧಿಕಾ ಶಂಕರ್ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಸೌಮ್ಯ ಪ್ರವೀಣ್ ಆಚಾರ್ಯ ಆಯ್ಕೆಗೊಂಡಿದ್ದಾರೆ.
