ಮೂಡುಬಿದಿರೆ

ಹಿರಿಯ ಪುರೋಹಿತ ಮಾರ್ನಾಡು ಲಕ್ಷ್ಮೀನಾರಾಯಣ ಉಪಾಧ್ಯಾಯ ಇನ್ನಿಲ್ಲ

ಮೂಡುಬಿದರೆ: ಹಿರಿಯ ಪುರೋಹಿತ ಮಾರ್ನಾಡು ಲಕ್ಷ್ಮಿನಾರಾಯಣ ಉಪಾಧ್ಯಾಯ (94 ವ.) ಸೆ.3ರಂದು ಅಲ್ಪ ಕಾಲದ ಅಸೌಖ್ಯದಿಂದ ಮೂಡು ಮಾರ್ನಾಡಿನ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೂಡಬಿದಿರೆ, ಕಾರ್ಕಳ, ಬೆಳುವಾಯಿ ಪರಿಸರದ ಕುಟುಂಬ ಪುರೋಹಿತರಾಗಿ , ಅನೇಕ ಸಂಘ ಸಂಸ್ಥೆಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾರ್ಗದರ್ಶಕರಾಗಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು , ಶಿವಮೊಗ್ಗ ಮುಂತಾದ ಜಿಲ್ಲೆಗಳ ಅನೇಕ ಕಡೆಗಳ ದೇವಸ್ಥಾನ/ದೈವ ಸಾನ್ನಿಧ್ಯಗಳ ಪ್ರತಿಷ್ಠೆ, ಇತ್ಯಾದಿ ಪೂಜಾ ವಿನಿಯೋಗಾದಿಗಳ ಪ್ರಧಾನ ಪುರೋಹಿತರಾಗಿ, ಸಲಹಾಕಾರಾಗಿ ಜನಪ್ರಿಯರಾಗಿದ್ದರು.

ಪ್ರಗತಿಪರ ಕೃಷಿಕರೂ ಆಗಿದ್ದ ಅವರು ಪತ್ನಿ ಹಾಗೂ ಪುತ್ರರಾದ ಪಡುಮಾರ್ನಾಡು ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷ ವಾಸುದೇವ ಉಪಾಧ್ಯಾಯ ಹಾಗೂ ಪುರೋಹಿತ ನರಸಿಂಹ ಉಪಾಧ್ಯಾಯ ಮತ್ತು ನಾಲ್ಕು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

Related posts

ನಮ್ಮ ಕಂಬಳ 2025- 26ರ ಪ್ರಶಸ್ತಿ ಪ್ರದಾನ – ಇರುವೈಲ್ ಪಾಣಿಲ ‘ತಾಟೆ ‘ , ಬೋಳದಗುತ್ತು ‘ದೋಣಿ ‘ ಗೆ ಶ್ರೇಷ್ಠ ಕೋಣ ಪ್ರಶಸ್ತಿ

Madhyama Bimba

ಮೂಡುಬಿದಿರೆಯ ನಿತೀಶ್ ಕಾಮತ್ ಸಿ.ಎ. ತೇರ್ಗಡೆ

Madhyama Bimba

ಮೂಡುಬಿದಿರೆ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More