ಮೂಡುಬಿದಿರೆ

ಮೂಡುಬಿದಿರೆಯ ನಿತೀಶ್ ಕಾಮತ್ ಸಿ.ಎ. ತೇರ್ಗಡೆ

ಭಾರತೀಯ ಲೆಕ್ಕಪತ್ರ ಪರಿಶೋಧಕರ ಸಂಸ್ಥೆ ವತಿಯಿಂದ ಮೇ ತಿಂಗಳಲ್ಲಿ ನಡೆಸಲಾದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಮೂಡುಬಿದಿರೆಯ ನಿತೀಶ್ ಕಾಮತ್ ಅವರು ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ.

ಮೂಡುಬಿದಿರೆಯ ಮಿತ್ತಬೈಲಿನ ನಿತ್ಯಾನಂದ ಕಾಮತ್ ಹಾಗೂ ಶ್ರೀಮತಿ ನಂದಿತಾ (ಪ್ರತಿಮಾ) ಕಾಮತ್ ದಂಪತಿಯ ಪುತ್ರರಾಗಿದ್ದಾರೆ.

ಸಿ.ಎ. ಫೌಂಡೇಶನ್ ಹಂತದ ತರಬೇತಿಯನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಸಿ.ಎ. ಇಂಟರ್‌ಮೀಡಿಯೇಟ್ ಹಂತದ ತರಬೇತಿಯನ್ನು ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವಿಷ್ಣು ದಯಾ & ಕೋ. ಎಲ್‌ಎಲ್‌ಪಿ ಸಂಸ್ಥೆಯಲ್ಲಿ ಸಿ.ಎ. ಆರ್ಟಿಕಲ್‌ಶಿಪ್ ತರಬೇತಿಯನ್ನು ಪಡೆದು, ಇದೀಗ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

Related posts

ಫ್ರೆಂಡ್ಸ್ ಇಲೆವೆನ್ ಬೆದ್ರ ಅಧ್ಯಕ್ಷರಾಗಿ ರಘುವೀರ್ ದೇವಾಡಿಗ, ಗೌರವಾಧ್ಯಕ್ಷರಾಗಿ ಅಶ್ವಿನ್ ಪಿರೇರಾ

Madhyama Bimba

ಯಕ್ಷದೇವ ಕಲಾಮಂಡಳಿ 29ನೇ ವರ್ಷದ ಯಕ್ಷ ಸಂಭ್ರಮದಲ್ಲಿ ದಾಸಪ್ಪ ರೈಗೆ ಯಕ್ಷದೇವ ಪ್ರಶಸ್ತಿ

Madhyama Bimba

ಬಿರುಗಾಳಿಗೆ ಹಾನಿಗೀಡಾದ ಪತ್ರಕರ್ತ ಜಗದೀಶ್ ಮನೆಯಲ್ಲಿ ಪಾಲಡ್ಕ ಬಿಲ್ಲವ ಸಂಘದಿಂದ ಶ್ರಮದಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More