ಕಾರ್ಕಳ: ಅಕ್ರಮ ಸ್ಪೋಟಕವನ್ನು ಬಳಸಿ ಕಲ್ಲು ಪುಡಿ ಮಾಡಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾದ ಘಟನೆ ಸೆ. 10 ರಂದು ವರದಿಯಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್.ರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಲ್ಯಾ ಗ್ರಾಮದ ಕುಂಟಾಡಿ ಮಣ್ಣು ರಸ್ತೆಯಲ್ಲಿ ರಾತ್ರಿ 8.00 ಗಂಟೆ ಸುಮಾರಿಗೆ KL-10-BJ-7942 ಟಿಪ್ಪರ್ ಲಾರಿಯೊಂದನ್ನು ಹಿಂಬಾಲಿಸಿ ಹೋಗಿ ಪರಿಶೀಲಿಸಿದಾಗ ಅದು ಖಾಲಿ ಇದ್ದು, ಆದರೆ ಅದೇ ಸ್ಥಳದಲ್ಲಿ KL-65-V-0865 ಮತ್ತು KL-85-C-2992 ನಂಬರ್ ನ ಲಾರಿಗಳು ಕಲ್ಲುಗಳನ್ನು ಲೋಡ್ ಮಾಡಿ ನಿಲ್ಲಿಸಿದ್ದವು. ಕೋರೆಯ ಪಕ್ಕದಲ್ಲಿ ಇಟಾಚಿ ವಾಹನ ಇದ್ದು, ಸ್ಥಳದಲ್ಲಿದ್ದ ಹರೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ಮತ್ತು ಇತರರನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಪಡೆಯದೆ ಸ್ಪೋಟಕವನ್ನು ಬಳಸಿ ಕಲ್ಲು ಪುಡಿಮಾಡಿ ಸಾಗಾಟ ಮಾಡುತ್ತಿರುವ ಬಗ್ಗೆ ಕಂಡು ಬಂದಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
