ಮೂಡುಬಿದಿರೆ ಪೇಟೆಯಲ್ಲಿ ಸಮಾಜ ಮಂದಿರದ ಗಣೇಶೋತ್ಸವದ ಕೊನೆಯ ದಿನವಾಗಿ ಇಂದು ಶುಕ್ರವಾರ 18 ನೇ ತಾರೀಕು ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮೂಡಬಿದ್ರೆ ಪೇಟೆಯಲ್ಲಿ ಗಣೇಶ ದೇವರ ಮೂರ್ತಿಯ ಶೋಭಾಯಾತ್ರೆ ಮೆರವಣೆಗೆ ಇರುವುದರಿಂದ ಮಧ್ನಾಹ್ಯ 10-00 ಗಂಟೆಯಿಂದ ಮೂಡಬಿದ್ರೆ ಪೇಟೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮಧ್ನಾಹ್ಯ 2-00ಗಂಟೆಯ ಬಳಿಕ ವಾಹನಗಳ ಸಂಚಾರದ ಮಾರ್ಗಗಳನ್ನು ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ.
ಮಂಗಳೂರುನಿಂದ ಕಾರ್ಕಳ ಕಡೆಗೆ ಸಂಚರಿಸುವ ವಾಹನಗಳು ಮೂಡಬಿದ್ರೆ ಹೊರವರ್ತುಲ ರಸ್ತೆಯಾದ ಇನ್ನರ್ ವೀಲ್, ರಿಂಗ್ ರೋಡ್ ,ಅಲಂಗಾರ ಮಾರ್ಗವಾಗಿ ಕಾರ್ಕಳ ಕಡೆಗೆ ಸಂಚರಿಸುವುದು,
ಮಂಗಳೂರುನಿಂದ ಮೂಡಬಿದ್ರೆ ಬೆಳ್ತಂಗಡಿ,ಬಂಟ್ವಾಳ ಕಡೆಗಳಿಗೆ ಸಂಚರಿಸುವ ವಾಹನಗಳು ಮೂಡಬಿದ್ರೆಯ ಹೊರವರ್ತುಲ್ ರಸ್ತೆಯಾದ ವಿದ್ಯಾಗಿರಿ-ಮಾಸ್ತಿಕಟ್ಟೆ ಕ್ರಾಸ್ ರಸ್ತೆ, ಮಾಸ್ತಿಕಟ್ಟೆ, ಪೇಪರ್ ಮಿಲ್ ಕ್ರಾಸ್ ರಸ್ತೆ , ಪೇಪರ್ ಮಿಲ್ ಯಾಗಿ ಬಂಟ್ವಾಳ ಕಡೆಗೆ ಕೀರ್ತಿನಗರವಾಗಿ ಬೆಳ್ತಂಗಡಿ ಕಡೆಗೆ ಸಂಚರಿಸುವುದು. ಮೂಡಬಿದ್ರೆಯಿಂದ ಶಿರ್ತಾಡಿ ಕಡೆಗೆ ಸಂಚರಿಸುವವರು ಮೂಡಬಿದ್ರೆ ಹೊರವರ್ತುಲ ರಸ್ತೆಯಾದ ಇನ್ನರ್ ವೀಲ್, ರಿಂಗ್ ರೋಡ್ ,ಅಲಂಗಾರ, ಜೈನ್ ಪೇಟೆ ಮಾರ್ಗವಾಗಿ ಶಿರ್ತಾಡಿ ಕಡೆಗೆ ಸಂಚರಿಸುವುದು.
ಬೆಳ್ತಂಗಡಿ ಬಂಟ್ವಾಳ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೂಡಬಿದ್ರೆ ಹೊರವರ್ತುಲ ರಸ್ತೆಯಾದ ಪೇಪರ್ ಮಿಲ್, ಮಾಸ್ತಿಕಟ್ಟೆ, ವಿದ್ಯಾಗಿರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.
ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಲಘ ವಾಹನಗಳು ಮೂಡಬಿದ್ರೆ ಹೊರವರ್ತುಲ ರಸ್ತೆಯಾದ ಸತ್ಯನಾರಾಯಣ ದೇವಸ್ಥಾನ, ಅಮರಶ್ರೀ ಟಾಕೀಸ್, ಮೂಡಬಿದ್ರೆ ಸರಕಾರಿ ಆಸ್ಪತ್ರೆ ಬಳಿ ಎಡಕ್ಕೆ ತಿರುಗಿ ಮಾಸ್ತಿಕಟ್ಟೆ ,ವಿದ್ಯಾಗಿರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.
ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಮಂಗಳೂರು, ಕಾರ್ಕಳ ಕಡೆಗೆ ಸಂಚರಿಸು ವಾಹನಗಳು ಮೂಡಬಿದ್ರೆ ಹೊರವರ್ತುಲ ರಸ್ತೆಯಾದ ಮಹಾವೀರ ಕಾಲೇಜು ಕೊಡಂಗಲ್ಲು ಕ್ರಾಸ್, ಕೋಟೆಬಾಗಿಲು, ಜೈನ್ ಪೇಟೆ ಅಲಂಗಾರ ಮಾರ್ಗವಾಗಿ ಸಂಚರಿಸುವುದು.
ಗಣೇಶೋತ್ಸವ ಮೆರವಣೆಗೆಗೆ ಬರುವ ಸಾರ್ವಜನಿಕರು ತಮ್ಮ ವಾಹನವನ್ನು ಪೊಲೀಸ್ ಬಳಿ ಶಾಲಾ ಮೈದಾನ ,ಕೆಇಬಿ ಬಳಿ, ಕೈಕಂಬ ಜಂಕ್ಷನ್ ಬಳಿ ಇರುವ ಖಾಲಿ ಜಾಗ ಹಾಗೂ ಸ್ವರಾಜ್ಯ ಮೈದಾನ ಬಳಿ , ಕನ್ನಡ ಭವನದ ಬಳಿ ಮಾಸ್ತಿಕಟ್ಟೆ ಬಳಿ ,ಕೋರ್ಟ ರೋಡ್ ಬಳಿ ಪಾರ್ಕಿಂಗ್ ಮಾಡುವುದು.
ಮೂಡಬಿದ್ರೆ ಪೇಟೆ ಬಸ್ ನಿಲ್ದಾಣ ಬಳಿ, ಸಮಾಜ ಮಂದಿರ ಬಳಿ, ಮಾರ್ಕೇಟ್ ಕಟ್ಟಡ ಬಳಿ, ಹನುಮಾನ ದೇವಸ್ಥಾನ ಬಳಿ ಮಸೀದಿ ರಸ್ತೆಯಲ್ಲಿ ,ಆಳ್ವಾಸ್ ಆಸ್ಪತ್ರೆ ರಸ್ತೆಯಲ್ಲಿ , ಪುರಸಭೆಯ ರಸ್ತೆಯಲ್ಲಿ ,ಪಟ್ಟಾಡಿ ರಸ್ತೆಯಲ್ಲಿ ಅಮರಶ್ರೀ ಟಾಕೀಸ್ ರಸ್ತೆಯಲ್ಲಿ ಜಿವಿ ಪೈ ಆಸ್ಪತ್ರೆ ಬಳಿ, ನಿಶ್ಮೀತಾ ಸರ್ಕಲ್ ಬಳಿ, ಐ.ಬಿ ರೋಡ್ ಬಳಿ ವಾಹನಗಳ ಪಾರ್ಕಿಂಗ್ ನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ, ಸಾರ್ವಜನಿಕರು ವಾಹನ ಸಂಚಾರದ ಸಮಯ ಪೊಲೀಸರೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
