Blog

ಬೋಳ ವ್ಯವಸಾಯ ಸೇವಾ ಸಹಕಾರ ಸಂಘದ ಮಹಾ ಸಭೆ

ಬೋಳ ವ್ಯವಸಾಯ ಸೇವಾ ಸಹಕಾರ ಸಂಘ ಇದರ ಮಹಾ ಸಭೆಯು ಸೆಪ್ಟೆಂಬರ್ 19 ರಂದು ಬೋಳ ಪಕಲ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಜೈನ್ ವಹಿಸಿದ್ದರು.

ಈ. ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಶೇ 16 ಡಿವಿಡೆಂಡ್ ನೀಡಲಾಯಿತು. ಸಂಘವು 2025 – 26 ನೇ ಸಾಲಿನಲ್ಲಿ 300 ಕೋಟಿ ವ್ಯವಹಾರ ಮಾಡಿ ಸಂಘವು ಸಾಧನೆಗೈದಿದೆ.

ಈ ವರ್ಷದಲ್ಲಿ 94 ಲಕ್ಷ ಲಾಭ ಘೋಷಣೆ ಮಾಡಲಾಯಿತು.

ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀಮತಿ ದೀಪಾ ಯೋಗೀಶ್ ಶೆಟ್ಟಿ , ನಿರ್ದೇಶಕರಾದ ಸದಾಶಿವ ಶೆಟ್ಟಿ ಬೋಳ, ಮುರಳೀಧರ ಶರ್ಮ, ಅವಿನಾಶ್ ಮಲ್ಲಿ, ಜಯರಾಮ್ ಸಾಲ್ಯಾನ್, ಸೂರ್ಯಕಾಂತ್ ಶೆಟ್ಟಿ, ಗಣಪತಿ ಭಟ್, ಮೋಹನ್ ದಾಸ್ ಅಡ್ಯOತಾಯ, ಪ್ರವೀಣ್ ಸಾಲ್ಯಾನ್, ನಳಿನಿ ಶೆಟ್ಟಿ, ಸತೀಶ್ ನಾಯ್ಕ್, ದಿವ್ಯ ನಾಯಕ್, ಸುಂದರ, ದಿನೇಶ್ ಶೆಟ್ಟಿ, ಪ್ರೇಮ ಮೂಲ್ಯ ಹಾಗೂ ಲೆಕ್ಕ ಪರಿಶೋಧಕರಾದ ನಿತ್ಯಾನಂದ ಪ್ರಭು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉತ್ತಮ ಕೃಷಿಕ ಶೀನ ಮೂಲ್ಯ, ಬೊಗ್ಗು ಮೂಲ್ಯ, ಜೀವಂಧರ ಕುಮಾರ್ ಹಾಗೂ ಉತ್ತಮ ಗ್ರಾಹಕರಾದ ಶ್ರೀ ರಾಮ್ ರಾವ್ ಬಿ ಎಲ್, ಲಿಂಗಪ್ಪ ದೇವಾಡಿಗ, ಲಿಯೋ ಸಾಲ್ದಾನ, ರಾಘು ಮೂಲ್ಯರನ್ನು ಸನ್ಮಾನ ಮಾಡಲಾಯಿತು. ಪಿ ಯು ಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 90 ಶೇ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಸೌಮ್ಯ, ಪ್ರಮೀಳಾ ಶೆಟ್ಟಿ ಸುಮಂಗಲ ಪ್ರಾರ್ಥನೆಗೈದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದೀಪಾ ಯೋಗೀಶ್ ಶೆಟ್ಟಿ ವರದಿ ವಾಚಿಸಿದರು.ನವೀನ ಚಂದ್ರ ಜೈನ್ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು. ಜ್ಯೋತಿ, ಸೌಮ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು

Related posts

ಸುನಿಲ್ ಕುಮಾರ್ ತಲೆ ಬೇಕು ಎಂಬವನ ಬಂಧನ

Madhyama Bimba

ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ

Madhyama Bimba

ಮಿಯ್ಯಾರು ಕಂಬಳ ಪ್ರದೇಶದಲ್ಲಿ ತ್ಯಾಜ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More