ಕಾರ್ಕಳಹೆಬ್ರಿ

ಎನ್‌ಸಿಎಪಿ 2026 ವಿಜ್ಞಾನ ಮೇಳ: ರಾಜೇಶ್ವರಿ ನ್ಯಾಷನಲ್ ಸಂಸ್ಥೆಗೆ ದ್ವಿತೀಯ ಸ್ಥಾನ

ಸಾಣೂರು: ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದ ‘ನಿಟ್ಟೆ ಕ್ಲೈಮೇಟ್ ಆಕ್ಷನ್ ಪ್ರೋಗ್ರಾಮ್’ (ಎನ್‌ಸಿಎಪಿ 2026) ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ಸಾಣೂರಿನ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಹಾಗೂ ಪಿ.ಯು. ಕಾಲೇಜು ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದೆ.

ಸಂಸ್ಥೆಯ ವಿದ್ಯಾರ್ಥಿಗಳಾದ ಸಾವನ್ ಕುಮಾರ್ ಟಿ.ವಿ., ಅದಿತ್ ಶೆಟ್ಟಿ ಹಾಗೂ ಚಿರಾಗ್ ದೇವಾಡಿಗ ಅವರು ಸಿದ್ಧಪಡಿಸಿದ ‘ಪಾಚಿ ಜೈವಿಕ ರಿಯಾಕ್ಟರ್ (Algae Bioreactor)’ ಕಾರ್ಯಕಾರಿ ಮಾದರಿಗೆ ಈ ಪ್ರಶಸ್ತಿ ಲಭಿಸಿದೆ. ಇಂಗಾಲದ ಪ್ರಮಾಣವನ್ನು ತಗ್ಗಿಸುವಲ್ಲಿ ಹಾಗೂ ಹವಾಮಾನ ಬದಲಾವಣೆಯ ಸವಾಲಿಗೆ ಪಾಚಿ ತಂತ್ರಜ್ಞಾನವು ಹೇಗೆ ಸುಸ್ಥಿರ ಪರಿಹಾರವನ್ನು ಒದಗಿಸಬಲ್ಲದು ಎಂಬುದನ್ನು ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಪ್ರದರ್ಶಿಸಿದರು. ಅವರ ಪ್ರಸ್ತುತಿ ಹಾಗೂ ಮಾದರಿಯು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.

ವಿದ್ಯಾರ್ಥಿಗಳ ಸಂಶೋಧನಾ ಮನೋಭಾವ, ವೈಜ್ಞಾನಿಕ ಚಿಂತನೆ ಹಾಗೂ ನಾವೀನ್ಯತೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Related posts

ಮುದ್ರಾಡಿಯಲ್ಲಿ ರಸ್ತೆಗುರುಳಿದ ಮರ

Madhyama Bimba

ಕಡ್ತಲ: ವರ್ಗಾವಣೆಗೊಂಡ ಪಿಡಿಓ ಸುರೇಖಾರವರಿಗೆ ಅಭಿನಂದನಾ ಸಮಾರಂಭ

Madhyama Bimba

ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆ: ಶಶಿಧರ್ ಶೆಟ್ಟಿ ಮತ್ತು ಚೇತನ್ ಕುಮಾರ್ ಪಿ. ತೇರ್ಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More