ಮಿಯ್ಯಾರು ಕಂಬಳ ನಡೆಯುವ ಪ್ರದೇಶದ ರಸ್ತೆ ತ್ಯಾಜ್ಯ ತಂದು ಹಾಕುತ್ತಿರುವ ಬಗ್ಗೆ ಮಿಯ್ಯಾರು ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ನೆಲ್ಸನ್ ಡಿ ಸೋಜ ಆಕ್ರೋಶ ವ್ಯಕ್ತ ಪಡಿಸಿದ್ದಾರೆ
ಈ ಪ್ರದೇಶದಲ್ಲಿ ಸುಮಾರು 50 ಮನೆಗಳಿವೆ. ಇವೆಲ್ಲ ತಿಳಿದೂ ಕೂಡ ರಾತ್ರಿ ಹೊತ್ತಿನಲ್ಲಿ ಇಲ್ಲಿ ತ್ಯಾಜ್ಯ ತಂದು ಸುರಿಯುವ ಕಿಡಿ ಗೇಡಿಗಳ ವರ್ತನೆ ನಿಜಕ್ಕೂ ಅಸಹನೀಯ ಎಂದು ಹೇಳಿದ್ದಾರೆ.
ಇಂತಹ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗ ಈ ಪ್ರದೇಶದಲ್ಲಿ ಹರಡುವ ಸಂಭವ ಇದ್ದು, ಇಂತಹ ಪ್ರಕರಣ ಮರುಕಳಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.