ಕಾರ್ಕಳಮೂಡುಬಿದಿರೆ

ಪಂಚಾಯತ್ ನೌಕಕರ ಮುಷ್ಕರ: ಜನಸೇವೆಯಲ್ಲಿ ವ್ಯತ್ಯಯ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪಂಚಾಯತ್ ನೌಕಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು ಕೂಡ ಮುಂದುವರಿದಿದೆ.


ಪಂಚಾಯತ್ ಪಿಡಿಒ, ಕಾರ್ಯದರ್ಶಿಗಳು ಸೇರಿದಂತೆ ಇತರ ಸಿಬ್ಬಂದಿಗಳು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಪಂಚಾಯತ್ ನೌಕರರ ಸಂಘದ ಆದೇಶದಂತೆ ಎಲ್ಲಾ ಗ್ರಾಮ ಪಂಚಾಯತುಗಳಲ್ಲಿ ಕೆಲಸ ಸ್ಥಗಿತಗೊಳಿಸಿ ನೌಕರರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಪ್ರತೀ ತಾಲೂಕಿನಲ್ಲಿ ಪಂಚಾಯತ್ ವಿವಿಧ ಸ್ಥರದ ಸುಮಾರು ೭೦ರಿಂದ ೮೦ರಷ್ಟು ನೌಕರರ ಬೆಂಬಲ ಪ್ರತಿಭಟನೆಗೆ ದೊರೆತಿದೆ. ಮೂಡುಬಿದಿರೆ, ಕಾರ್ಕಳ ತಾಲೂಕಿನಲ್ಲಿಯೂ ಪಂಚಾಯತುಗಳನ್ನು ಬಂದ್ ಮಾಡಿ ನೌಕರರು ಬೆಂಬಲಿಸಿದ್ದಾರೆ. ಆದ್ದರಿಂದ ಕಳೆದೆರಡು ದಿನಗಳಿಂದ ಪಂಚಾಯತ್ ಸೇವೆಯಲ್ಲಿ ತುಂಬಾ ವ್ಯತ್ಯಯ ಉಂಟಾಗಿದೆ.

ಗ್ರಾಮೀಣ ಪ್ರದೇಶದ ನಾಗರಿಕರು ಈ ಮುಷ್ಕರದ ಬಗ್ಗೆ ಅರಿವು ಇಲ್ಲದೆ ಪಂಚಾಯತ್‌ಗಳಿಗೆ ಭೇಟಿ ನೀಡಿ ವಾಪಾಸಾಗುತ್ತಿರುವ ದೃಶ್ಯ ಸಾಮಾನ್ಯವೆನಿಸಿದೆ. ಸರಕಾರ ಈ ಬಗ್ಗೆ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Related posts

ಮೂಡುಬಿದಿರೆ ವಿಶ್ವಕರ್ಮ ಸಭಾಭವನ ಲೋಕಾರ್ಪಣೆ

Madhyama Bimba

ಕಾಮೆಡ್-ಕೆ ಫಲಿತಾಂಶ: ಜ್ಞಾನಸುಧಾಕ್ಕೆ ಸಾವಿರದೊಳಗಿನ 9 ರ್‍ಯಾಂಕುಗಳು- ರಾಷ್ಟ್ರಮಟ್ಟದಲ್ಲಿ ಕನಿಷ್ಕ್‌ಗೆ 34ನೇ ರ್‍ಯಾಂಕ್

Madhyama Bimba

ಶಿರ್ಲಾಲಿನಲ್ಲಿ ಆ. 16ರಂದು ದ್ವಿತೀಯ ವರ್ಷದ ಕುಣಿತ ಭಜನಾ ಸ್ಪರ್ಧೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More