ಕಾರ್ಕಳಹೆಬ್ರಿ

ಕಾರ್ಕಳ ಸರಕಾರಿ ಪ.ಪೂ. ಕಾಲೇಜಿನಲ್ಲಿ “ಹದಿಹರೆಯದ ಸಮಸ್ಯೆಗಳು” ವಿಶೇಷ ಉಪನ್ಯಾಸ ಕಾರ್ಯಕ್ರಮ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು, ಕಾರ್ಕಳ ಇಲ್ಲಿನ
ವಿದ್ಯಾರ್ಥಿಗಳಿಗೆ ” ಹದಿಹರೆಯದ ಸಮಸ್ಯೆಗಳು” ಈ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ವಿಶೇಷ ಉಪನ್ಯಾಸವನ್ನು ಉಡುಪಿಯ ಡಾ. ಎ. ವಿ. ಬಾಳಿಗಾ ಹಾಸ್ಪಿಟಲ್ ನ ಮನೋವೈದ್ಯರು ಹಾಗೂ ಹಲವಾರು ಮನೋವೈಜ್ಞಾನಿಕ ವಿಷಯಗಳ ಕನ್ನಡ ಲೇಖಕರು ಆಗಿರುವ ಡಾ. ವಿರೂಪಾಕ್ಷ ದೇವರಮನೆ ರವರು ಪ್ರಸ್ತುತಪಡಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ರೊ.ಡಾ. ಭರತೇಶ ಆದಿರಾಜ್, ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ ಮಂಜುನಾಥ ಹೆಗ್ಡೆ, ಪೂರ್ವಾಧ್ಯಕ್ಷರಾದ ರೊ. ಪ್ರಕಾಶ್ ಪೈ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ನಿರುಪಮಾ ಕಾಮತ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕಿಯಾದ ಶ್ರೀಮತಿ ಜಯಶ್ರೀ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳ ಈ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು.

Related posts

ಮನಿಯಾಲು ನಾಗೇಶ್ ನಾಯಕ್ ನಿಧನ

Madhyama Bimba

ಕೈಸ್ಟ್‌ಕಿಂಗ್: ಕ್ರಿಕೆಟ್‌ನಲ್ಲಿ ಪ್ರಾಥಮಿಕ ವಿಭಾಗದ ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Madhyama Bimba

ಅಜೆಕಾರು: ಆರ್ಟ್ ಆಫ್ ಲಿವಿಂಗ್ ವತಿಯಿಂದ ಯೋಧ ನಮನ- ನಿವೃತ್ತ ಸೈನಿಕರು ಹಾಗೂ ರೈತ ಮಹಿಳೆಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More